ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ ಪತ್ನಿ ವಿರುದ್ಧ ಕೊಟ್ಟ ಸಿಎಂ ಕುಮಾರಸ್ವಾಮಿಯ ಹೇಳಿಕೆ..!!?
ರಾಜಕೀಯ ವಲಯದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಿಂದ ಕಾವೇರುತ್ತಿದೆ….ಅದರಲ್ಲೂ ಮಂಡ್ಯ ಲೋಕಸಭಾ ಚುನಾವಣೆಯ ಅಖಾಡ ಮಾತ್ರ ದಿನದಿಂದ ದಿನಕ್ಕೆ ಹೆಚ್ಚು ಸುದ್ದಿಯಾಗುತ್ತಿದೆ.. ಕೆಲವು ದಿನಗಳ ಹಿಂದಷ್ಟೆ ಮಂಡ್ಯದ ಮಗಳು ಅಖಾಡಕ್ಕೆ ಇಳಿಯಬೇಕೋ ಅಥವಾ ಮಂಡ್ಯದ ಸೊಸೆ ಅಖಾಡಕ್ಕೆ ಇಳಿಯಬೇಕೊ ಎಂಬ ಚರ್ಚೆಗಳು ಸಾಕಷ್ಟು ಸುದ್ದಿಯಾಗುತ್ತಿದ್ದವು. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಈ ವಿಷಯದ ಬಗ್ಗೆ ಚರ್ಚೆಯಾದವು. ಇದರ ನಡುವೆ ಸಿಎಂ ಕುಮಾರಸ್ವಾಮಿ ಕೊಟ್ಟಿರುವ ಹೇಳಿಕೆ ಹೆಚ್ಚು ಸದ್ದು ಮಾಡ್ತಿದೆ.
'ನನ್ನ ಪತ್ನಿ ಅನಿತಾ ತೆಲುಗು ಮೂಲದವರು' ಎಂಬ ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುಮಲತಾ ಅವರನ್ನು ಮಂಡ್ಯ ಗೌಡ್ತಿ ಅಲ್ಲ ಎನ್ನುವ ಜೆಡಿಎಸ್ ಮುಖಂಡರು ಅನಿತಾ ಅವರನ್ನು ಮಂಡ್ಯ ಗೌಡ್ತಿ ಎನ್ನುವರೇ ಎಂದು ಅಂಬರೀಷ್ ಅಭಿಮಾನಿಗಳು ಜೆಡಿಎಸ್ ಮುಖಂಡರನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿಯವರ ಮೊದಲ ಸಿನಿಮಾ ಕನ್ನಡ, ತೆಲುಗಿನಲ್ಲಿ ತೆರೆ ಕಂಡಿತ್ತು, ಈ ವೇಳೆಯಲ್ಲಿ ಆ ಸಿನಿಮಾದ ಪ್ರಚಾರ ಸಲುವಾಗಿ ಕುಮಾರಸ್ವಾಮಿಯವರು ಆಂದ್ರದ ಸ್ಥಳೀಯ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುತ್ತಿದ್ದರು. ಈ ವೇಳೆಯಲ್ಲಿ ಅವರು ತೆಲುಗು ಭಾಷೆಯ ಪರಿಚಯದ ಬಗ್ಗೆ ಮಾತನಾಡುವಾಗ ಕುಮಾರಸ್ವಾಮಿ ಅವರು ತನ್ನ ಪತ್ನಿ ಅನಿತಾ ತೆಲುಗು ಮೂಲದವರಾಗಿದ್ದು ಭಾಷೆಯ ಪರಿಚಯವಿದೆ ಎಂದು ತಿಳಿಸಿದ್ದಾರೆ. ಸಂದರ್ಶನದಲ್ಲಿ ನಿಖಿಲ್ ಕುಮಾರಸ್ವಾಮಿ ಕೂಡ ಧ್ವನಿಗೂಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೆ ಇದರ ನಡುವೆ ಜಾತಿ ರಾಜಕಾರಣ ಬರುತ್ತದೆಯೆ ಎಂಬ ಅನುಮಾನಗಳು ಮೂಡುತ್ತಿವೆ.
Comments