ಮನೆ ಮಗಳು V/S ಮನೆ ಸೊಸೆ… ಜೆಡಿಎಸ್’ನಿಂದ ಕೇಳಿಬಂದ ಅಚ್ಚರಿಯ ಹೆಸರು ..!?

ಮುಂಬರುವ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ… ಅದರಲ್ಲೂ ಮಂಡ್ಯ ಲೋಕಸಭಾ ಅಖಾಡದ ಕಾವು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ.. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇದೇ ವೇಳೆ ಮಂಡ್ಯದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಎಲ್ಲರಲ್ಲೂ ಸಾಕಷ್ಟು ಚರ್ಚೆ ನಡೆಯುತ್ತಿದೆ. ಟಿಕೆಟ್ ವಿಚಾರದಲ್ಲಿ ಮನೆಮಗಳು ಹಾಗೂ ಮನೆ ಸೊಸೆ ನಡುವೆ ಇದೀಗ ಸಮರ ಏರ್ಪಟ್ಟಿದಂತೆ ಇದೆ…
ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂಬರೀಶ್ ಪತ್ನಿ ಸುಮಲತಾ ಸ್ಪರ್ಧೆ ವಿಚಾರ ಕೇಳಿ ಬಂದ ಬೆನ್ನಲ್ಲೆ ಈ ಕ್ಷೇತ್ರಕ್ಕೆ ಮತ್ತೊಂದು ಹೆಸರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಲಕ್ಷ್ಮೀ ಅಶ್ವಿನ್ ಗೌಡರವರ ಹೆಸರು ಕೇಳಿ ಬಂದಿದೆ. ಕಳೆದ ಲೋಕಸಭಾ ಉಪಚುನಾವಣೆ ವೇಳೆಯೂ ಕೂಡ ಜೆಡಿಎಸ್ ಅಭ್ಯರ್ಥಿಯಾಗಿ ಲಕ್ಷ್ಮೀ ಹೆಸರು ಹೆಚ್ಚಾಗಿ ಕೇಳಿ ಬಂದಿತ್ತು. ಲಕ್ಷ್ಮೀ ಅಶ್ವಿನ್ ಗೌಡ ಮೂಲತಃ ಮಂಡ್ಯದ ಮಳವಳ್ಳಿಯವರಾಗಿದ್ದರೆ, ಸುಮಲತಾ ಅಂಬಿ ವಿವಾಹವಾದ ಬಳಿಕ ಇಲ್ಲಿನ ಸೊಸೆಯಾದರು. ಕಾಂಗ್ರೆಸ್ ನಿಂದ ಸುಮಲತಾ ಅವರನ್ನು ಕಣಕ್ಕಿಳಿಸುವ ಯತ್ನ ನಡೆಯುತ್ತಿದ್ದರೆ, ಜೆಡಿಎಸ್ ನಿಂದ ಲಕ್ಷ್ಮೀ ಅಶ್ವಿನ್ ಗೌಡ ಹೆಸರು ಚಾಲ್ತಿಯಲ್ಲಿದೆ.
Comments