ಬಿಜೆಪಿ ಜೊತೆ ಕೈ ಜೋಡಿಸಲು ಜೆಡಿಎಸ್ ಸಿದ್ಧ ..!!? ಹಾಗಾದ್ರೆ ಕುಮಾರಸ್ವಾಮಿಯವರ ಮುಂದಿನ ನಡೆಯೇನು..?

ಕಾಂಗ್ರೆಸ್ ಜೊತೆ ಮೈತ್ರಿ ಕಳೆದುಕೊಳ್ಳಲು ಜೆಡಿಎಸ್ ರೆಡಿ..ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಜೆಡಿಎಸ್ ಸರ್ಕಾರ ರಚನೆಯಾಗುತ್ತಾ..? ರಾಜ್ಯದಲ್ಲಿ ಹೊಸ ಮೈತ್ರಿಗೆ ಮಾತುಕತೆ ನಡೆಯುತ್ತಿದ್ಯಾ…? ಬಿಜೆಪಿ ಜೊತೆ ಕೈ ಜೋಡಿಸಲು ಜೆಡಿಎಸ್ ಸಿದ್ಧ ಎಂಬ ಮಾತುಗಳು ಇದೀಗ ಕೇಳಿ ಬರುತ್ತಿವೆ…ಈಗಾಗಲೇ ರಚನೆಯಾಗಿರುವ ಮೈತ್ರಿ ಸರ್ಕಾರದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಲೆ ಇವೆ… ಮೈತ್ರಿ ಸರ್ಕಾರದ ಕಾರ್ಯವೈಖರಿ ಕುರಿತು ಕೆಲ ಕಾಂಗ್ರೆಸ್ ಶಾಸಕರುಗಳು ಅಪಸ್ವರ ತೆಗೆದಿರುವ ಬೆನ್ನಲ್ಲೇ ದೋಸ್ತಿಗಳ ನಡುವಿನ ಶೀತಲ ಸಮರ ಇನ್ನೂ ತಾರಕಕ್ಕೇರಿದೆ..
ಈಗಾಗಲೇ ಮೈತ್ರಿ ಸರ್ಕಾರದಲ್ಲಿ ಸೂಪರ್ ಸಿಎಂ ಎಂದೇ ಕರೆಯಲಾಗುತ್ತಿರುವ ಸಚಿವ ಹೆಚ್.ಡಿ. ರೇವಣ್ಣ, ಮಂಗಳವಾರದಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ…. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆದಿರುವ ಈ ದಿಢೀರ್ ಬೆಳವಣಿಗೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ರೇವಣ್ಣ ಏಕೆ ಬಿಎಸ್ ವೈ ಅವರನ್ನು ಭೇಟಿ ಮಾಡಿದ್ದಾರೆ ಎಂದು ಎಲ್ಲರೂ ತಲೆಕೆಡಿಸಿಕೊಳ್ಳುತ್ತಿರುವುದಂತು ಸುಳ್ಳಲ್ಲ… ಬಿಜೆಪಿ ಜೊತೆ ಕೈ ಜೋಡಿಸಲು ಜೆಡಿಎಸ್ ಸಿದ್ಧವಾಗಿದ್ಯಾ ಎಂಬ ಗೊಂದಲ ಸೃಷ್ಟಿಯಾಗಿವೆ..
Comments