ತುಪ್ಪದ ಬೆಡಗಿಗಾಗಿ ಸಭೆಯಲ್ಲಿ ಕಿತ್ತಾಡಿಕೊಂಡ ಪಾಲಿಕೆ ಸದಸ್ಯರು..!! ಕಾರಣ ಏನ್ ಗೊತ್ತಾ..?

ರಾಜಕೀಯ ವಲಯದಲ್ಲಿ ಯಾವ ಸಮಯದಲ್ಲಿ ಯಾವ ರೀತಿಯ ಗಲಾಟೆಗಳು ಆಗುತ್ತವಫೋ ಗೊತ್ತಿಲ್ಲ..ಆದರೆ ಪಾಲಿಕೆಯ ಸದಸ್ಯರು ಸಿಲ್ಲಿ ಕಾರಣಕ್ಕಾಗಿ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ಸಿಕ್ಕಾಪಟ್ಟೆ ಗದ್ದಲ.. ನಟಿ ರಾಗಿಣಿಗಾಗಿ ಪಾಲಿಕೆ ಸದಸ್ಯರು ಕಿತ್ತಾಡಿಕೊಂಡು ಸಭೆಯನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದ್ದಾರೆ... ಮತ್ತೊಂದೆಡೆ ಕುಡಿಯುವ ನೀರಿಗಾಗಿ ಪಾಲಿಕೆ ಸಭೆ ರಣಾಂಗಣವಾಗಿತ್ತು. ಮಂಗಳವಾರ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯಿತು. ಪಾಲಿಕೆ ಸಭೆ ಆರಂಭವಾದ ಸಮಯದಿಂದಲೂ ಶುರುವಾದ ಗದ್ದಲ, ಸಭೆ ಮುಗಿಯುವವರೆಗು ಮುಂದುವರೆದಿತ್ತು.. ಅವಳಿ ನಗರದ ಅಭಿವೃದ್ಧಿ ವಿಚಾರವಾಗಿ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಪಾಲಿಕೆ ಸದಸ್ಯರು ಚಿತ್ರನಟಿ ರಾಗಿಣಿ ವಿಷಯಕ್ಕೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಎಲ್ಲರಿಗೂ ಕೂಡ ಸ್ವಚ್ಚತೆಯ ಅರಿವು ಮೂಡಿಸಲು ಅಕ್ಟೋಬರ್ ತಿಂಗಳಿನಲ್ಲಿ ನಟಿ ರಾಗಿಣಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಯಭಾರಿಯಾಗಿ ಬಂದಿದ್ದರು.. ಇದರ ವೆಚ್ಚ 1 ಲಕ್ಷ 80 ಸಾವಿರ ಹಣವನ್ನು ಪಾಲಿಕೆ ಭರಿಸಬೇಕೆಂದು ಸದಸ್ಯರಾದ ಶಿವಾನಂದ್ ಮುತ್ತಣ್ಣ ಸಭೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದಂತೆ ಉಳಿದ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ರಾಗಿಣಿ ಬಂದಾಗಿನ ವೆಚ್ಚವನ್ನು ಪಾಲಿಕೆ ಭರಿಸಬಾರದೆಂದು ಕೆಲ ಸದಸ್ಯರು ಹೇಳುತ್ತಿದ್ದಂತೆ ಸಭೆಯಲ್ಲಿ ಗದ್ದಲ ಪ್ರಾರಂಭವಾಗಿದೆ... ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸಭೆಯನ್ನೆ ಮೊಟಕುಗೊಳಿಸಲಾಯಿತು. ಮುಂಜಾನೆ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ರೊಚ್ಚಿಗೆದ್ದಿದ್ದ ಪಾಲಿಕೆ ಸದಸ್ಯರು ಕುಡಿಯುವ ನೀರಿನ್ನು ಸಮರ್ಪಕವಾಗಿ ನೀಡುತ್ತಿಲ್ಲವೆಂದು ಗಲಾಟೆ ಮಾಡಿದ್ದಾರೆ. ಈ ನಡುವೆ ರಾಗಿಣಿ ವಿಷಯಕ್ಕಾಗಿ ಸಾಕಷ್ಟ ಗಲಾಟೆಗಳು ಆದವು,,
Comments