ಬಿಜೆಪಿಗೆ 'ಕೈ'ಕೊಟ್ಟ ಶಾಸಕ….! ಕಾಂಗ್ರೇಸ್’ಗೆ ಯೂಟರ್ನ್ ..!!

ಕಳೆದ 15 ದಿನಗಳಿಂದಲೂ ರಾಜಕೀಯ ವಲಯದಲ್ಲಿ ಸಾಕಷ್ಟು ಗುಸು ಗುಸು ಪಿಸು ಪಿಸು ಕೇಳಿ ಬರುತ್ತಿದೆ.. ಆಪರೇಷನ್ ಕಮಲದ ಪಿತೂರಿ ಬಲು ಜೋರಾಗಿಯೇ ನಡೆಯುತ್ತಿದೆ ಎಂಬ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿತ್ತು.. ಕಳೆದ ಹಲವು ದಿನಗಳಿಂದಲೂ ಕಾಂಗ್ರೆಸ್ ನಾಯಕರು ಸಂಪರ್ಕಕ್ಕೆ ಸಿಗದೇ 'ಆಪರೇಷನ್ ಕಮಲ' ಕ್ಕೆ ಸಿಕ್ಕಿಹಾಕಿಕೊಂಡಿರುವ ಅನುಮಾನ ಎಲ್ಲೆಡೆ ಇತ್ತು.. ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಈಗ ತಮ್ಮ ಕ್ಷೇತ್ರಕ್ಕೆ ಹಿಂದಿರುಗಿದ್ದಾರೆ..
ಮಹೇಶ್ ಕುಮಟಳ್ಳಿ ಮುಂಬೈನ ಪಂಚತಾರಾ ಹೊಟೇಲ್ ನಲ್ಲಿ ಬಿಜೆಪಿ ನಾಯಕರೊಂದಿಗೆ ಇದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.. ಇಂತಹ ಮಾತುಗಳು ಕೇಳಿ ಬಂದಿದ್ದರು ಕೂಡ ಇದೀಗ ಮತ್ತೆ ಮರಳಿ ಕ್ಷೇತ್ರಕ್ಕೆ ಬಂದಿರುವ ಮಹೇಶ್ ಕುಮಟಳ್ಳಿ ಸುದ್ಧಿಗಾರರೊಂದಿಗೆ ಮಾತನಾಡಿ, ಅದೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೆ ಬೆನ್ನು ನೋವಿನ ಚಿಕಿತ್ಸೆಗಾಗಿ ತಾವು ಮುಂಬೈಗೆ ಹೋಗಿದ್ದಾಗಿ ತಿಳಿಸಿ ಬಿಜೆಪಿ ಗೆ ಬಿಗ್ ಶಾಕ್ ನೀಡಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿಲ್ಲ. ಕಾಂಗ್ರೆಸ್ ಪಕ್ಷವನ್ನು ಬಿಡುವ ಯಾವುದೇ ಆಲೋಚನೆ ಇಲ್ಲ ಎಂದು ತಿಳಿಸಿರುವ ಮಹೇಶ್ ಕುಮಟಳ್ಳಿ, ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲವೆಂದು ಹೇಳಿದ್ದಾರೆ.
Comments