ಅಭಿಷೇಕ್ ಅಂಬರೀಶ್’ಗೆ  ಟಿಕೆಟ್ ನಿರಾಕರಿಸಿದ ಸಿಎಂ ಎಚ್​ಡಿಕೆ..!! ಮತ್ಯಾರಿಗೆ ಮಂಡ್ಯ ಲೋಕಸಭಾ ಅಖಾಡ..!!!

24 Jan 2019 4:21 PM | Politics
7863 Report

ದಿನದಿಂದ ದಿನಕ್ಕೆ ಮಂಡ್ಯ ಲೋಕಸಭಾ ಚುನಾವಣೆಯು ರಂಗೇರುತ್ತಿದೆ…ಯಾರಿಗೆ ಟಿಕೇಟ್ ಸಿಗೋತ್ತೋ ಎಂಬ ಗೊಂದಲದಲ್ಲಿ ಇದ್ದಾರೆ.. ಅಷ್ಟೆ ಅಲ್ಲದೆ ಟಿಕೆಟ್ಗಾಗಿ ಹೋರಾಡೋದಕ್ಕೆ ಇದು ಮಹಾಭಾರತದ ಕುರುಕ್ಷೇತ್ರವಲ್ಲ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ರೆಬೆಲ್ಸ್ಟಾರ್ ಅಂಬರೀಶ್ ಕುಟುಂಬಕ್ಕೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮಂಡ್ಯ ಲೋಕಸಭಾ ಚುನಾವಣೆಯು ಮತ್ತಷ್ಟು ರಂಗೇರಲಿದೆ ಎಂದು ಹೇಳಲಾಗುತ್ತಿದೆ…

ಕುಮಾರಸ್ವಾಮಿಯವರು ಮಾಧ್ಯಮದವರ ಜೊತೆಗೆ ಮಾತನಾಡುವ ಸಮಯದಲ್ಲಿ ಸಂಸತ್ ಚುನಾವಣೆಗೆ ಅಂಬರೀಷ್​​ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಗೌಡ ಹೆಸರು ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಉತ್ತರಿಸಿದ ಅವರು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಪ್ರಕಟ ಮಾಡುತ್ತೇನೆ ಅಂಬರೀಷ್ಕುಟುಂಬ ಕಾಂಗ್ರೆಸ್ನಲ್ಲಿದೆ. ಅಂಬರೀಶ್ ಅವರು ಜೆಡಿಎಸ್ ಪಕ್ಷಕ್ಕೆ ಬಂದಿರಲಿಲ್ಲ. ರಾಜ್ಯದ ಸಿಎಂ ಆಗಿ ಅವರು ವಿಧಿವಶರಾದಾಗ ಗೌರವ ಸಲ್ಲಿಸಿದ್ದೇನೆ. ಟಿಕೆಟ್ಗಾಗಿ ಹೋರಾಡೋದಕ್ಕೆ ಇದು ಮಹಾಭಾರತದ ಕುರುಕ್ಷೇತ್ರವಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.. ಹಿನ್ನಲೆಯಲ್ಲಿ ಅಭಿಷೇಕ್ ಗೆ ಟಿಕೇಟ್ ಸಿಗುತ್ತೋ ಇಲ್ಲವೋ ಎಂಬುದು ಸದ್ಯದ ಪ್ರಶ್ನೆ.. ನಿಖಿಲ್ ಕುಮಾರಸ್ವಾಮಿಯವರನ್ನು ಅಖಾಡಕ್ಕೆ ಇಳಿಸುವ ಎಲ್ಲಾ ಸಾಧ್ಯತೆಗಳಿವೆ ಎಂಬ ಮಾತುಗಳು ರಾಜಕೀಯವಲಯದಲ್ಲಿ ಕೇಳಿಬರುತ್ತಿದೆ..

Edited By

Manjula M

Reported By

Manjula M

Comments