ಲೋಕಸಭಾ ಚುನಾವಣೆಯೆ ಬಗ್ಗೆ ನಿಖಿಲ್ ಹೇಳಿದ್ದೇನು..!!! ಮಾಧ್ಯಮದವರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ‘ಜಾಗ್ವಾರ್’ ಹುಡುಗ

24 Jan 2019 10:54 AM | Politics
956 Report

ರಾಜಕೀಯ ವಲಯದಲ್ಲಿ ಲೋಕಸಭಾ ಚುನಾವಣೆಯು ಹೆಚ್ಚು ಸದ್ದು ಮಾಡುತ್ತಿದೆ.. ಅದರಲ್ಲೂ ಮಂಡ್ಯ ಲೋಕಸಭಾ ಚುನಾವಣೆ ಮಾತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ..ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಇಟ್ಟುಕೊಳ್ಳುತ್ತದೆಯೋ ಅಥವಾ ಜೆಡಿಎಸ್‌ಗೆ ಬಿಟ್ಟುಕೊಡುತ್ತದೆಯೋ ಎಂಬುದು ಇನ್ನು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ..  ಅಭಿಷೇಕ್ ಅಂಬರೀಶ್, ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಅನೇಕ  ಬಾರಿ  ಕೇಳಿಬಂದಿದೆ. ಇದೆ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮದವರು ನಿಖಿಲ್ ಕುಮಾರಸ್ವಾಮಿಯವರನ್ನು ಪ್ರಶ್ನೆ ಮಾಡಿದ್ದರು.

‘ಸೀತಾರಾಮ ಕಲ್ಯಾಣ’  ಚಿತ್ರದ ಚಿತ್ರಿಕರಣ ಸಮಯದಲ್ಲಿ ಮಂಡ್ಯದಲ್ಲಿ ಸಿನಿಮಾಗೆ ಸಂಬಂಧಿಸಿ ಮಾಧ್ಯಮ ಗೋಷ್ಠಿ ಏರ್ಪಡಿಸಿದ್ದರು. ನಿಖಿಲ್ ಗೆ ಮಂಡ್ಯದಲ್ಲಿ ಸೀಟ್ ಸಿಕ್ಕಿದ್ರೆ ರಾಜಕೀಯಕ್ಕೆ ಬರ್ತಿರಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ನಿಖಿಲ್ ‘ಸಿನಿಮಾನ ಸಿನಿಮಾ ರೀತಿ ನೋಡಿ‌ ಅದನ್ನ ಪೋಲಿಟಿಸೈಜ್ ಮಾಡೋದು ಬೇಡ’ ಎಂಬ ಉತ್ತರ ನೀಡಿದರು. ಒಟ್ಟಿನಲ್ಲಿ ರಾಜಕಾರಣ ಬೇರೆ, ಸಿನಿಮಾ ಬೇರೆ ಎಂದು ನಿಖಿಲ್ ಈ ಮೂಲಕ ಸ್ಪಷ್ಟಪಡಿಸಿದರು.  ಸಿನಿಮಾವನ್ನು ಸಿನಿಮಾ  ಎಂದೇ ನೋಡಿ ಎನ್ನುವ ಮೂಲಕ ರಾಜಕಾರಣದ ಪ್ರಶ್ನೆ ಕೇಳಬೇಡಿ ಎಂದು ನಿಖಿಲ್ ತಿಳಿಸಿದರು.. ಒಟ್ಟಾರೆ ಸಿನಿಮಾನೇ ಬೇರೆ ರಾಜಕೀಯ ನೇ ಬೇರೆ ಎನ್ನುವುದನ್ನು ನಿಖಿಲ್ ಸ್ಪಷ್ಟ ಪಡಿಸಿದ್ದರು..

Edited By

Manjula M

Reported By

Manjula M

Comments