ಪೊಲೀಸರಿಗೆ ರಾಜ್ಯ ಸರ್ಕಾರದಿಂದ ಸಿಕ್ತು ಗುಡ್ ನ್ಯೂಸ್..!!
ರಾಜ್ಯ ಸರ್ಕಾರ ಬಂದ ದಿನದಿಂದಲೂ ಒಂದಲ್ಲ ಒಂದು ಒಳ್ಳೆಯ ಕೆಲಸಗಳನ್ನು ಮಾಡುತ್ತಲೆ ಬರುತ್ತಿದ್ದಾರೆ.. ಹೆಣ್ಣು ಮಕ್ಕಳಿಗಾಗಿ, ವಿದ್ಯಾರ್ಥಿಗಳಿಗಾಗಿ, ಬೀದಿ ಬದಿ ಪ್ಯಾಪಾರಿಗಳಿಗಾಗಿ, ಹೀಗೆ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತಂದು ಸಹಾಯ ಮಾಡುತ್ತಿದ್ದಾರೆ.. ಇದೀಗ ಪೊಲೀಸರಿಗೆ ರಾಜ್ಯಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ, ಮುಂದಿನ ಬಜೆಟ್ ನಲ್ಲಿ ಪೊಲೀಸರ ವೇತನವನ್ನು ಹೆಚ್ಚಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ..
ಸಿದ್ದಗಂಗಾ ಶ್ರೀಗಳ ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ಮುಂದಿನ ಬಜೆಟ್ ನಲ್ಲಿ ಔರದ್ಕರ್ ವರದಿ ಜಾರಿ ಮಾಡಿ ಪೊಲೀಸರ ಬದುಕು ಹಸನು ಮಾಡುವ ಯೋಜನೆ ರೂಪಿಸುವುದಾಗಿ ಗೃಹಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಶ್ರೀಗಳ ಕೊನೆ ದರ್ಶನಕ್ಕೆ ಲಕ್ಷಾಂತರ ಜನ ಸೇರಿದರೂ ಕಿಂಚಿತ್ತೂ ಮಠದ ಆವರಣದಲ್ಲಿ ಶಿಸ್ತಿಗೆ ಲೋಪ ಬಾರದಂತೆ, ಕಾನೂನಿಗೆ ಧಕ್ಕೆ ಬಾರದಂತೆ ನಡೆದಾಡುವ ದೇವರನ್ನು ಶ್ರದ್ಧೆ ಭಕ್ತಿ ಪ್ರೀತಿಯಿಂದ ಅಂತಿಮ ವಿಧಿವಿಧಾನ ನಡೆಸಲಾಯಿತು. ತುಮಕೂರು ಪೊಲೀಸರ ಜೊತೆಗೆ ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತ ಜಿಲ್ಲೆಯ ಸುಮಾರು ಮೂವತ್ತು ಸಾವಿರದಷ್ಟು ಪೊಲೀಸರ ದಂಡು ಸ್ಥಳದಲ್ಲಿ ನಿಯೋಜನೆಗೊಂಡಿತ್ತು. ಈ ಹಿನ್ನಲೆಗಳು ಪೊಲೀಸರು ತಮ್ಮ ಕೆಲಸವನ್ನು ಬಹಳ ನಿಷ್ಟೆಯಿಂದ ಮಾಡಿದ್ದಾರೆ.. ಹಾಗಾಗಿ ವೇತನದಲ್ಲಿ ಹೆಚ್ಚಳ ಮಾಡುವುದಾಗಿ ತಿಳಿಸಿದ್ದಾರೆ.
Comments