ಕಾಂಗ್ರೆಸ್ ನಾಯಕರಿಗೆ ನಟಿ ಕರೀನಾ ಕಪೂರ್ ಬೇಕೇ ಬೇಕಂತೆ..!

ಮುಂಬರುವ ಲೋಕಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷದವರು ಸಿದ್ದತೆಗಳನ್ನು ನಡೆಸುತ್ತಿದ್ದಾರೆ.. ಇದರ ನಡುವೆ ಜಗಳಗಳು ಕಿತ್ತಾಟಗಳು ಎಲ್ಲವೂ ಕೂಡ ನಡೆಯುತ್ತಿವೆ. ರೆಸಾರ್ಟ್ ರಾಜಕಾರಣ, ಆಮಿಷಗಳು ಎಲ್ಲ ರೀತಿಯ ತಂತ್ರಗಳು ಕೂಡ ಅತೃಪ್ತ ಶಾಸಕರನ್ನು ಸೆಳೆಯಲು ವಿರೋಧ ಪಕ್ಷಗಳು ಶತ ಪ್ರಯತ್ನವನ್ನು ನಡೆಸುತ್ತಿವೆ…ಆದರೂ ಕೂಡ ಯಾವುದು ಎಲ್ಲೂ ಬದಲಾಗಲೇ ಇಲ್ಲ… ಅಂದುಕೊಂಡಂತೆ ಯಾವುದು ಆಗಲಿಲ್ಲ… ಹಾಗಗಿ ಲೋಕಸಭಾ ಚುನಾವಣಗೆ ಸಿದ್ದತೆಗಳು ಜೋರಾಗಿಯೇ ನಡೆಯುತ್ತಿದೆ..
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆಯಲು ನಾನಾ ರೀತಿಯ ಯೋಜನೆ ಹಾಕುತ್ತಿರುವ ಕಾಂಗ್ರೆಸ್ ಇದೀಗ ಬಾಲಿವುಡ್ ನಟಿ ಕರೀನಾ ಕಪೂರ್ ಸೆಳೆಯಲು ಪ್ರಯತ್ನವನ್ನು ನಡೆಸುತ್ತಿದೆ.ಕರೀನಾ ಕಪೂರ್ ರನ್ನು ಪಕ್ಷಕ್ಕೆ ಕರೆತಂದು ಚುನಾವಣೆಗೆ ನಿಲ್ಲಿಸಿದರೆ, ಅಥವಾ ಪ್ರಚಾರಕ್ಕೆ ಕರೆತಂದರೆ ಯುವ ಮತದಾರರನ್ನು ಓಟು ಹಾಕಿಯೇ ಹಾಕುತ್ತಾರೆ ಎಂಬುದು ಕಾಂಗ್ರೆಸ್ ನಾಯಕರ ಯೋಜನೆಯಾಗಿದೆ. ಕೆಲವು ಕಾಂಗ್ರೆಸ್ ನಾಯಕರು ಇದೀಗ ಕರೀನಾರನ್ನು ಭೋಪಾಲ್ ಕ್ಷೇತ್ರದಿಂದ ಕಣಕ್ಕಿಳಿಸಲು ಪಟ್ಟು ಹಿಡಿದಿದ್ದಾರೆ. ಕರೀನಾ ಬೇಕೇ ಬೇಕು ಎಂದು ಹಠ ಮಾಡುತ್ತಿದ್ದಾರಂತೆ. ಆದರೆ ಕರೀನಾ ಮಾತ್ರ ಚುನಾವಣೆಗೆ ಬರುತ್ತಾರ ಎಂಬುದು ಸಂಶಯ..
Comments