ರಾಜೀನಾಮೆ ನೀಡಲು ಮುಂದಾದ್ರ ಕಾಂಗ್ರೆಸ್’ನ ಈ ಪ್ರಭಾವಿ ಸಚಿವ ..!?

ರಾಜಕೀಯ ವಲಯದಲ್ಲಿ ರಾಜೀನಾಮೆ ರಾಜೀನಾಮೆ ಎನ್ನುವ ಪದ ಕೇಳಿ ಕೇಳಿ ಸಾಕಾಗಿ ಹೋಗಿದೆ.. ಅತೃಪ್ತ ಶಾಸಕರು ಕೆಲವೊಮ್ಮೆ ರಾಜೀನಾಮೆ ಕೊಡ್ತಾರೆ... ಮತ್ತೆ ಕೆಲವರು ರಾಜೀನಾಮೆ ಕೊಡ್ತಿವಿ ಅಂತ ಹೇಳಿ ಸುಮ್ನೆ ಆಗ್ತಾರೆ…ಇದೀಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಅತೃಪ್ತ ಶಾಸಕರಾದ ಡಾ. ಉಮೇಶ್ ಜಾಧವ್, ಬಿ.ನಾಗೇಂದ್ರ ಸೇರಿದಂತೆ ನಾಲ್ಕೂ ಮಂದಿಯೊಂದಿಗೆ ನಾನು ಸಂಪರ್ಕವನ್ನು ಹೊಂದಿದ್ದೇನೆ. ಅವರೊಟ್ಟಿಗೆ ಈ ವಿಷಯವಾಗಿ ಚರ್ಚೆ ನಡೆಸಲಾಗಿದ್ದು, ಅದರ ಫಲಿತಾಂಶವನ್ನು ಶೀಘ್ರವೇ ಬಹಿರಂಗಪಡಿಸುತ್ತೇವೆ.
ಅತೃಪ್ತರನ್ನು ಸಮಾಧಾನಪಡಿಸಲು ಅಗತ್ಯಬಿದ್ದರೆ ಸಚಿವ ಸ್ಥಾನವನ್ನೂ ತ್ಯಾಗ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.. ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್ , ನನಗೆ ಕೇವಲ ಬಿ.ನಾಗೇಂದ್ರ ಮಾತ್ರವಲ್ಲ ಉಮೇಶ್ ಜಾಧವ್ ಸೇರಿದಂತೆ ಎಲ್ಲರೊಂದಿಗೂ ಉತ್ತಮ ಸಂಪರ್ಕವಿದೆ.. ನಾನು ಎಲ್ಲರೊಟ್ಟಿಗೆ ಚೆನ್ನಾಗಿದ್ದೇನೆ... ಅತೃಪ್ತಿ ಎಂಬುದು ಪ್ರತಿಯೊಬ್ಬ ಮನುಷ್ಯನಿಗೂ ಇದ್ದೇ ಇರುತ್ತದೆ.ನನಗೆ ವೈಯಕ್ತಿಕವಾಗಿ ಈ ಶಾಸಕರೊಂದಿಗೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಸತತವಾಗಿ ಮಾತುಕತೆ ನಡೆಸುತ್ತಿದ್ದು, ಅಂತಿಮ ಪ್ರತಿಫಲ ಸದ್ಯದಲ್ಲೇ ತಿಳಿಸುತ್ತೇನೆ ಎಂದು ಹೇಳಿದರು.ಅತೃಪ್ತ ಶಾಸಕರನ್ನು ತೃಪ್ತಿಪಡಿಸಲು ಅಗತ್ಯವಾದರೆ ಸಚಿವ ಸ್ಥಾನವನ್ನು ಬಿಟ್ಟುಕೊಡಲು ನಾನು ಸಿದ್ಧನಿದ್ದೇನೆ. ನನಗೂ ಸಹ ಹಲವು ವೇಳೆಯಲ್ಲಿ ಸಚಿವ ಸ್ಥಾನ ಸಿಗದ ಅನುಭವ ಆಗಿದೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
Comments