ಭಾಷಣ ಸಾಕು ಅಂತ ಚೀಟಿ ಬರೆದು ಕಳಿಸಿದ ದಿನೇಶ್ ಗುಂಡೂರಾವ್..! ಯಾರಿಗೆ ಗೊತ್ತಾ..?
ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಎಚ್.ಕೆ.ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಇದರ ಅಂಗವಾಗಿ ಅರಮನೆಯ ಮೈದಾನದಲ್ಲಿ ಎಚ್.ಕೆ.ಪಾಟೀಲ್ ಅಧಿಕಾರ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ದೇಶಿಸಿ ಡಿಸಿಎಂ ಪರಮೇಶ್ವರ್ ಅವರು ಮಾತನಾಡುತ್ತಿದ್ದ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಅವರು ಭಾಷಣ ಸಾಕು ಅಂತ ಚೀಟಿಯನ್ನು ಬರೆದುಕೊಟ್ಟರು ಎಂದು ಹೇಳಲಾಗುತ್ತಿದೆ.
ಈ ಸಮಯದಲ್ಲಿ ಚೀಟಿಯನ್ನು ನೋಡದೆ ನನಗ್ಯಾಕಪ್ಪ ಚೀಟಿ ಕೊಡ್ತೀರ ಎಂದು ಪರಮೇಶ್ವರ್ ಅವರು ಚೀಟಿಯನ್ನ ನೋಡದೆ ಕೆಳಗೆ ಎಸೆದರು. ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್ ನಮ್ಮ ಶಾಸಕರಿಗೆ ಹಣ,ಅಧಿಕಾರದ ಆಸೆ ತೋರಿಸ್ತಿದ್ದಾರೆ.ಆಪರೇಷನ್ ಕಮಲ 2 ಮಾಡೋಕೆ ಹೊರಟಿದ್ದಾರೆ ಅಂತ ಆರೋಪವನ್ನು ಮಾಡಿದರು... ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಶೇಮ್, ಇಂತ ಕೀಳುಮಟ್ಟದ ರಾಜಕಾರಣ ಸರಿಯಲ್ಲ, ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಪರಮೇಶ್ವರ್ ವಿರೋಧ ಪಕ್ಷದವರ ವಿರುದ್ದ ಕಿಡಿಕಾರಿದರು.
Comments