ಆಪರೇಷನ್ ಕಮಲ ಸಕ್ಸಸ್ ಆದ್ರೂ, ಬಿಜೆಪಿಗೆ ಬಿಗ್ ಶಾಕ್ ..!! ಬಿಜೆಪಿಗೆ ಸಿಕ್ಕಿದೆ ಈ ಎಚ್ಚರಿಕೆ..!!!

ಈಗಾಗಲೇ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ದೋಸ್ತಿ ಸರ್ಕಾರವನ್ನು ಕೆಳಗಿಳಿಸಲು ವಿರೋಧ ಪಕ್ಷಗಳು ಸಾಕಷ್ಟು ಹರಸಾಹಸವನ್ನು ಮಾಡುತ್ತಿವೆ.. ಇರುವ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎನ್ನಲಾಗಿದೆ. ಆದರೆ ಒಂದು ವರ್ಗ ಮಾತ್ರ ಆಪರೇಷನ್ ಕಮಲಕ್ಕೆ ಮುಂದಾದ ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂದು ಹೇಳಲಾಗುತ್ತಿದೆ..
ಬಿಜೆಪಿಯ ಆಪರೇಷನ್ ಕಮಲ ಸಕ್ಸಸ್ ಆದ್ರೂ ಕೂಡ ಬಿಜೆಪಿಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ ಎಂದು ಒಂದು ವರ್ಗ ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟವಾಗಿ ಸಂದೇಶವನ್ನು ತಿಳಿಸಿದೆಯಂತೆ… ಏಕೆಂದರೆ 2018 ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಹೆಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿದ್ದರು. ಚುನಾವಣೆಯಲ್ಲಿ ಒಕ್ಕಲಿಗರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದರು ಎಂದು ಹೇಳಲಾಗುತ್ತೆ, ಸಿದ್ದರಾಮಯ್ಯ ಅವರು ಹೆಚ್.ಡಿಡಿ-ಹೆಚ್.ಡಿಕೆ ಅವರನ್ನು ಟಾರ್ಗೆಟ್ ಮಾಡಿದ್ದರಿಂದಲೇ ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋಲುನುಭವಿಸಿತ್ತು. ಈಗ ಬಿಜೆಪಿ ಸರ್ಕಾರವನ್ನು ಉರುಳಿಸಿದರೆ ಒಕ್ಕಲಿಗರ ಕೋಪ ಬಿಜೆಪಿ ಕಡೆಗೆ ತಿರುಗಬಹುದು ಎನ್ನಲಾಗಿದ್ದು, ಈ ಕುರಿತು ಒಂದು ವರ್ಗ ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ಸಂದೇಶ ರವಾನಿಸಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ರಾಜಕೀಯದಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಹೇಳುವುದು ಕಷ್ಟವೇ ಸರಿ.. ಇರುವ ಸರ್ಕಾರವನ್ನು ಉರುಳಿಸಿ ಬಿಜೆಪಿ ಯಾವ ರೀತಿ ಅಧಿಕಾರವನ್ನು ನಡೆಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.
Comments