ಸಭೆ ನಡುವೆಯೇ ಪುತ್ರ ರೇವಣ್ಣಗೆ ಫುಲ್ ಕ್ಲಾಸ್ ತೆಗದುಕೊಂಡ ದೇವೇಗೌಡರು..!!

ಜೆಡಿಎಸ್ ವರಿಷ್ಟ ದೇವೆಗೌಡರೇ ತಮ್ಮ ಮಗ ರೇವಣ್ಣಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯುತ್ತಿದ್ದ ಸಮಯದಲ್ಲಿ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದ ಪುತ್ರ ರೇವಣ್ಣಗೆ ತಂದೆ ದೇವೇಗೌಡರೇ ಕ್ಲಾಸ್ ತೆಗೆದುಕೊಂಡಿದ್ದಾರೆ.ಮಗನಾದ ರೇವಣ್ಣ ಹಾಗೂ ಅಧಿಕಾರಿಗಳನ್ನು ಏರು ದನಿಯಲ್ಲಿ ದೊಡ್ಡ ಗೌಡರೆ ಗದರಿಸಿದ್ದಾರೆ.
ಹಾಸನದಲ್ಲಿ ನಡೆದಂತಹ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ವೇಳೆ ಘಟನೆ ನಡೆದಿದ್ದು ಸಭೆಯಲ್ಲಿ ಭಾಗಿಯಾಗಿ ಹೊರಹೋಗುವಾಗ ಅಧಿಕಾರಿಗಳ ಜೊತೆ ರೇವಣ್ಣ ಮಾತನಾಡುತ್ತಿದ್ದರು. 'ಏಯ್ ಯಾರ್ ಅದು ರೇವಣ್ಣ ಜೊತೆ ಮಾತನಾಡುವುದಾದರೆ ಪಕ್ಷಕ್ಕೆ ಹೋಗಿ, ರೇವಣ್ಣ ಮಾತನಾಡೋದಾದ್ರೆ ಇಲ್ಲಿಗೆ ಬರಲಿ ಇಲ್ಲಾ ಹೊರ ಹೋಗಿ ಎಂದು ಮಾಜಿ ಪ್ರಧಾನಿ ದೇವೆಗೌಡರು ಗದರಿದರು. ಇದರಿಂದ ರೇವಣ್ಣ ಒಂದು ನಿಮಿಷ ತಬ್ಬಿಬ್ಬಾಗಿದ್ದರು.
Comments