ಸರ್, ಹಾಸನ ಬಿಟ್ಟು ಮೈಸೂರಲ್ಲಿ ನಿಲ್ತಿರಾ…!? ಪ್ರತಾಪ್ ಸಿಂಹ ಹೀಗೆ ದೇವೆಗೌಡರನ್ನು ಕೇಳಿದ್ಯಾಕೆ..!?
ರಾಜಕೀಯದಲ್ಲಿ ಎಲ್ಲರದು ಒಂದು ಲೆಕ್ಕ ಆದ್ರೆ ದೇವೆಗೌಡರದೇ ಒಂದು ಲೆಕ್ಕ… ಅವರ ಲೆಕ್ಕ ಚಾರ ಯಾರಿಗೂ ತಿಳಿಯುವುದೇ ಇಲ್ಲ.. ರಾಜ್ಯ ರಾಜಕೀಯದಲ್ಲಿ ದೇವೆಗೌಡರ ಲೆಕ್ಕ ಊಹೆಗಳೇ ಬೇರೆ.. ಲೆಕ್ಕಾಚಾರ ಅಂದರೆ ಯಾವಾಗಲೂ ದೇವೇಗೌಡರದು ಎತ್ತಿದ ಕೈ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದಂತೆ, ಕ್ಷೇತ್ರ, ಸೀಟು ಹಂಚಿಕೆ ಲೆಕ್ಕಾಚಾರ ಎನ್ನುವುದು ಎಲ್ಲ ಪಕ್ಷಗಳಲ್ಲೂ ಕೂಡ ಪ್ರಾರಂಭವಾಗಿದೆ... ಈಗಾಗಲೇ ವಿಧಾನ ಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿ ಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳುತ್ತಾ ಎಂಬ ಚರ್ಚೆ ಶುರುವಾಗಿದೆ..
ಎಲ್ಲಾ ವಿಷಯಗಳು ಚರ್ಚೆಯಾಗುವ ಮೊದಲು ದೇವೆಗೌಡರು ನಮಗೆ ಏನು ಬೇಕು ಎಂಬುದನ್ನು ಕೂಲಂಕುಷವಾಗಿಯೇ ತಿಳಿಸಿ ಬಿಡುತ್ತಾರೆ.. ದೇವೇಗೌಡರು ಮಾತುಕತೆಗಿಂತ ಮುಂಚೆಯೇ ಕಾಂಗ್ರೆಸ್ ಜೊತೆ ಮೈತ್ರಿ ಆಗಬೇಕಾದರೆ 11ರಿಂದ 12 ಸೀಟು ಕೊಡಬೇಕು ಎಂದು ಎಲ್ಲೆಡೆ ಹೇಳುತ್ತಿದ್ದರೂ, ಆದರೆ ಇದೀಗ 9 ಕೊಟ್ಟರೂ ಸಾಕು ಎಂದು ಹೇಳುತ್ತಿದ್ದಾರಂತೆ. ಆದರೆ ವಿಷಯ ಏನೆಂದರೆ ಕಾಂಗ್ರೆಸ್’ಗೆ ಗೊಂದಲವಾಗಿರುವುದು ಸೀಟಿನ ವಿಷಯವಲ್ಲ…ಬದಲಿಗೆ ಕೇಳಿರುವ ಕ್ಷೇತ್ರಗಳು… ಈಗಿರುವ ಮಂಡ್ಯ, ಹಾಸನದ ಜೊತೆಗೆ ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಂಗಳೂರು ಉತ್ತರ ಕ್ಷೇತ್ರಗಳು ತಮಗೆ ಬೇಕೇ ಬೇಕು ಎಂದು ಗೌಡರು ಕೇಳುತ್ತಿದ್ದಾರೆ..ಒಂದು ವೇಳೆ ಇದನ್ನು ಏನಾದರೂ ರಾಹುಲ್ ಗಾಂಧಿ ಅವರು ಮೈತ್ರಿಯ ಮುಲಾಜಿಗೆ ಬಿದ್ದು ಒಪ್ಪಿಕೊಂಡರೆ ರಾಜ್ಯ ಕಾಂಗ್ರೆಸ್ ನಾಯಕರದು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಸ್ಥಿತಿ ಆದರೂ ಅದನ್ನ ಅನುಭವಿಸಲೇಬೇಕು ಎನ್ನುವ ಪರಿಸ್ಥಿತಿ ಬಂದೆ ಬರುತ್ತದೆ.. ದಿಲ್ಲಿಗೆ ಬಂದಿದ್ದ ದೇವೇಗೌಡರನ್ನು ಪ್ರತಾಪ್ ಸಿಂಹ 'ಏನ್ ಸರ್ ಹಾಸನ ಬಿಟ್ಟು ಮೈಸೂರಿಗೆ ಬರ್ತೀರಿ ಅಂತ ಸುದ್ದಿ ಇದೆ. ನಮ್ಮ ಭವಿಷ್ಯ ಏನು ಸರ್ ' ಎಂದು ದೊಡ್ಡ ಗೌಡರನ್ನು ಕೇಳಿದ್ರಂತೆ.. ನಿನ್ನ ಮತ್ತು ಸಿದ್ದು ನಡುವೆ ನಾನ್ ಬಂದು ಮಾಡಲಿ. ಇಬ್ಬರು ದಿಗ್ಗಜರು ನೀವು ದೇವೆಗೌಡರು ಹೇಳಿದ್ರಂತೆ..!!
Comments