ರಾಜಕೀಯ ವಲಯದಲ್ಲಿ ಬಾರೀ ಸಂಚಲನ ಮೂಡಿಸುವ ಹೇಳಿಕೆ ಕೊಟ್ಟ ಬಿಜೆಪಿ ಶಾಸಕ..!! ಬಿಜೆಪಿ ಶಾಸಕ, ದೇವೇಗೌಡ್ರು,ಕುಮಾರಸ್ವಾಮಿ ಬಗ್ಗೆ ಸಿಡಿಸಿದ್ರಾ ಹೊಸ ಬಾಂಬ್..!!?

ರಾಜಕೀಯ ವಲಯದಲ್ಲಿ ದಿನದಿಂದ ದಿನಕ್ಕೆ ಜಗಳಗಳು ಕಿತ್ತಾಟಗಳು, ಅವರ ಮೇಲೆ ಅವರ ಮೇಲೆ ಇವರು ಹೇಳುವುದು, ಇವರ ಮೇಲೆ ಅವರು ಹೇಳುವುದು ಕಾಮನ್ ಆಗಿ ಬಿಟ್ಟಿದೆ.. ಇದೀಗ ಬಿಜೆಪಿ ಶಾಸಕ ಬಸವನ ಗೌಡ ಯತ್ನಾಳ್ ಇದೇ ಕೆಲಸಕ್ಕೆ ಮುಂದಾಗಿದ್ದಾರೆ.ದೇವೇಗೌಡ್ರು, ಕುಮಾರಸ್ವಾಮಿ ಖರ್ಚಿಫ್ ನಲ್ಲಿ ಅಮೃತಾಂಜನ ಹಂಚಿಕೊಂಡಿರುತ್ತಾರೆ ಅ ಸಲುವಾಗಿ ಅವರಿಬ್ಬರು ಅಳುತ್ತಾರೆ ಅಂತ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಅವರು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ನಗರದಲ್ಲಿ ಮಾಧ್ಯಮದವರ ಜೊತೆಯಲ್ಲಿ ಮಾತನಾಡಿದರು, ಇದೇ ಸಂರ್ಭದಲ್ಲಿ ಅವರು ಮಾತನಾಡಿ ಅವರು ಯಾರ ಮೇಲೆ ಕೈ ಇಟ್ಟರು ಕೂಡ ಅವರು ಭಸ್ಮಾವಾಗುತ್ತಾರೆ. ಹೀಗಾಗಿ ಅವರು ಭಸ್ಮಾಸುರ ಅಂಥ ಮಾಜಿ ಪ್ರಧಾನಿ ಅವರನ್ನು ಗೇಲಿ ಮಾಡಿದರು. ಮಧ್ಯರಾತ್ರಿ ಸುಪ್ರಿಂಕೋರ್ಟ್ ನ್ಯಾಯಾಧೀಶರನ್ನು ದೇವೇಗೌಡ್ರು, ಕುಮಾರಸ್ವಾಮಿ ಭೇಟಿಯಾಗಿದ್ದರು ಅಂಥ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.ಈ ಹೇಳಿಕೆ ರಾಜಕೀಯ ವಲಯದಲ್ಲಿ ಬಾರೀ ಸಂಚಲನ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
Comments