ನಿಗಮ ಮಂಡಳಿ 2ನೇ ಪಟ್ಟಿ ಬಿಡುಗಡೆ, ಯಾರಿಗೆ ಸಿಕ್ತು ಚಾನ್ಸ್..!!

ನಿಗಮ ಮಂಡಳಿಯು ಈಗಾಗಲೇ ಶಾಸಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ..ಕಾಂಗ್ರೆಸ್ ಪಕ್ಷವು ತನ್ನ 20 ಶಾಸಕರ ಪಟ್ಟಿಯನ್ನು ನಿಗಮ ಮಂಡಳಿಗೆ ನೇಮಕ ಮಾಡಿ ಪಟ್ಟಿಯನ್ನು ಸಿಎಂ ಕುಮಾರಸ್ವಾಮಿ ಸಹಿಗಾಗಿ ಕಳುಹಿಸಿಕೊಟ್ಟಿತ್ತು, ಆದರೆ ಸಿಎಂ ಐದು ಜನ ಶಾಸಕರನ್ನು ಬಿಟ್ಟು ಉಳಿದ ಶಾಸಕರ ಹೆಸರುಗಳಿಗೆ ಮಾತ್ರವೇ ಸಹಿ ಹಾಕಿದ್ದು. ಅದು ಕಾಂಗ್ರೆಸ್ ನಲ್ಲಿ ಮತ್ತೊಮ್ಮೆಆಕ್ರೋಶಕ್ಕೆ ಕಾರಣವಾಗಿತ್ತು.
ಈಗ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಿಗಮ ಮಂಡಳಿ 2ನೇ ಪಟ್ಟಿಗೆ ಸಿಎಂ ಅಂಕಿತ ಹಾಕಿದ್ದು, ಪಟ್ಟಿಯಲ್ಲಿ ಎಸ್.ಟಿ.ಸೋಮಶೇಖರ್, ಎನ್.ಎ.ಹ್ಯಾರೀಸ್, ಕೆ.ಎನ್.ಸುಬ್ಬಾರೆಡ್ಡಿ ಅವರಿಗೆ ಸ್ಥಾನ ಸಿಕ್ಕಿದೆ. ಇನ್ನೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿಯೋಜಿತರಾಗಿದ್ದ ಸುಧಾಕರ್ ಮತ್ತು ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷ ವೆಂಕಟರಮಣಪ್ಪ ಅವರ ನೇಮಕಾತಿಗೆ ಸಿಎಂ ಅಂಕಿತ ಹಾಕದೇ ಇರುವುದು ಕೂಡ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಮೈತ್ರಿ ಸರ್ಕಾರದಲ್ಲಿ ಕೆಲವೊಮ್ಮೆ ಅನೇಕ ಒಳಜಗಳಗಳು ಇದರ ಸಲುವಾಗಿಯೇ ನಡೆಯುತ್ತದೆ..
Comments