ಮೈತ್ರಿ ಸರ್ಕಾರದಲ್ಲಿ ಮತ್ತೊಬ್ಬ ಕಾಂಗ್ರೆಸ್ ನಾಯಕ ಔಟ್..!?
ರಾಜಕೀಯ ವಲಯದಲ್ಲಿ ಒಳಗೊಳಗೆ ಕಿತ್ತಾಟಗಳು,ಜಗಳಗಳು ಹೊಸದೇನಲ್ಲ… ಇದೀಗ ಅಂತಹ ಜಗಳಗಳು ಬೀದಿಗೆ ಬಂದಿವೆ.. ಇದೀಗ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ನಾಯಕತ್ವ ಸೂಚಿಸಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಅವರಿಗೆ ಇರುವ ಹುದ್ದೆಯನ್ನು ತಪ್ಪಿಸಲು ರೆಡ್ಡಿಯಾಗಿರುವ ಜೆಡಿಎಸ್ ನಾಯಕತ್ವವು ಮಂಡಳಿಯ ಅಧ್ಯಕ್ಷ ಹುದ್ದೆಗೆ ಇರುವ ಮಾನದಂಡಗಳನ್ನು ಬಹು ಬೇಗ ಬದಲಾಯಿಸಲು ಮುಂದಾಗಿದ್ದು, ಜ.15ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಳಿ ಅಧ್ಯಕ್ಷ ಹುದ್ದೆಗೆ ಪರಿಷ್ಕೃತ ಮಾನದಂಡಕ್ಕೆ ಒಪ್ಪಿಗೆ ಪಡೆಯಲು ಮುಂದಾಗಿದೆ ಎಂದು ಕಾಂಗ್ರೆಸ್ ಮೂಲಗಳು ಜೆಡಿಎಸ್ ಮೇಲೆ ಆರೋಪ ವ್ಯಕ್ತ ಪಡಿಸಿದ್ದೇವೆ…
ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ವಿಜ್ಞಾನ ಶಾಖೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್ ಶಾಖೆಯಲ್ಲಿ ಸ್ನಾತಕ ಪದವಿ ಪಡೆದಿರುವವರು ಮಾತ್ರ ಅರ್ಹರು ಎಂದು ಮಾನದಂಡ ಬದಲಾದರೆ ಸಹಜವಾಗಿಯೇ ವೈದ್ಯ ಪದವಿ ಪಡೆದಿರುವ ಡಾ.ಸುಧಾಕರ್ ಅವರು ಅನರ್ಹರಾಗುವಂತೆ ಮಾಡಿದಂತಾಗುತ್ತದೆ. ಜೆಡಿಎಸ್ ವರಿಷ್ಠರ ಈ ತರಾತುರಿ ನಿರ್ಧಾರದ ಹಿಂದೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿ ನಿಂತಿರುವ ಪ್ರಮುಖ ಒಕ್ಕಲಿಗ ಸಮುದಾಯದ ಶಾಸಕ ಸುಧಾಕರ್ ಅವರಿಗೆ ಹುದ್ದೆ ತಪ್ಪಿಸುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡುವ ಉದ್ದೇಶವಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಇದೀಗ ಬಾರೀ ಚರ್ಚೆಯಾಗುತ್ತಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಿಂದ ಇದೀಗ ಕೆಲವು ಶಾಸಕರಿಗೆ ಕೊಕ್ ನೀಡಲು ಮುಂದಾಗಿದ್ದಾರೆ.
Comments