ಜೆಡಿಎಸ್ ನಾಯಕರ ವಿರುದ್ಧವೇ ಗರಂ ಆದ ಮಾಜಿ ಸಚಿವ ಹೆಚ್.ಎಂ.ರೇವಣ್ಣ
ಸ್ವಪಕ್ಷದಲ್ಲಿಯೇ ಕೆಲವೊಮ್ಮೆ ಬಿರುಕು ಬಿಡುವುದು ಕಾಮನ್ .. ಇದೀಗ ಕೋಮುವಾದಿ ಬಿಜೆಪಿ ಪಕ್ಷವನ್ನು ದೂರ ಇಡುವುದಕ್ಕಾಗಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಆದರೆ, ಇದೀಗ ಅವರ ಪಕ್ಷದಲ್ಲಿಯೇ ಎಲ್ಲರೂ ಮಾತನಾಡಲು ಪ್ರಾರಂಭ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ವಿರುದ್ಧ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಗರಂ ಆಗಿದ್ದಾರೆ ಎನ್ನಲಾಗಿದೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಣ್ಣ, ನಮ್ಮಲ್ಲಿ ಹೈಕಮಾಂಡ್ ಸಂಸ್ಕೃತಿ ಇರುವುದರಿಂದ ಅವರ ನಿರ್ದೇಶನದಂತೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ, ಆದರೆ ಇದೀಗ ಜೆಡಿಎಸ್ ನ ಎಲ್ಲರೂ ಮಾತನಾಡಲು ಪ್ರಾರಂಭ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನವನ್ನು ಹೊರಹಾಕಿದರು. ಇಬ್ಬರೂ ಚರ್ಚೆ ಮಾಡಿಯೇ ನಿಗಮ ಮಂಡಳಿಯನ್ನು ನೇಮಕ ಮಾಡಲಾಗಿದೆ. ಹಾಗಾಗಿ ಸ್ವಪಕ್ಷದಲ್ಲಿಯೇ ಬಿರುಕು ಮೂಡುತ್ತಿದೆ.
Comments