ಬಿಗ್ ಬ್ರೇಕಿಂಗ್: ಲೋಕಸಭಾ ಚುನಾವಣೆಗೂ ಮೊದಲೇ ಡಿಕೆ ಶಿವಕುಮಾರ್ ಬಂಧನ..!! ??

ಮುಂಬರುವ ಲೋಕಸಭಾ ಚುನಾವಣೆ ಎಲ್ಲಾ ಪಕ್ಷದವರು ಸಕಲ ಸಿದ್ದತೆಗಳನ್ನು ನಡೆಸಿಕೊಳ್ಳುತ್ತಿದ್ದಾರೆ.. ಆದರೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಬರೋಬ್ಬರಿ 110 ಕೋಟಿಗೂ ಹೆಚ್ಚು ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆದಾಯ ತೆರಿಗೆ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಲೋಕಸಭಾ ಚುನಾವಣೆಗೂ ಮುನ್ನ ಡಿ.ಕೆ.ಶಿವಕುಮಾರ್ ಅವರ ಬಂಧನಕ್ಕೆ ಮಾಸ್ಟರ್ ಪ್ಲ್ಯಾನ್ ನಡೆಸಲಾಗುತ್ತಿದೆ ಎನ್ನಲಾಗಿದೆ. ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ಬೇನಾಮಿ ಆಸ್ತಿ ವ್ಯವಹಾರ ಸಂಬಂಧ ಬೇನಾಮಿ ಆಸ್ತಿಯನ್ನು ವಿಶೇಷ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಐಟಿ ಇಲಾಖೆಯ ಉನ್ನತ ಅಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣಗಳು ನಡೆಯುತ್ತಿವೆ. ಹಂತ ಹಂತವಾಗಿ ವಿಚಾರಣೆಗೆ ಕರೆಸಿ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎನ್ನಲಾಗುತ್ತಿದೆ. . ಶಿವಕುಮಾರ್ ಅವರ ತಾಯಿಯನ್ನೂ ಕೂಡ ವಿಚಾರಣೆ ನಡೆಸಲಾಗಿತ್ತು, ಈ ಹಿಂದೆ ಡಿಕೆಶಿ ಹೇಳಿದ ಉತ್ತರಕ್ಕೂ ತಾಯಿ ನೀಡಿದ ಉತ್ತರಕ್ಕೂ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆಯಂತೆ. ಈ ಕುರಿತು ಐಟಿ ಅಧಿಕಾರಿಗಳು ದೆಹಲಿಯ ಪ್ರಧಾನ ಕಚೇರಿಗೆ ಮತ್ತು ಬೇನಾಮಿ ನ್ಯಾಯಾಧೀಕರಣಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ. ಆದ್ದರಿಂದ ಯಾವುದೇ ಕ್ಷಣದಲ್ಲಾದರೂ ಡಿಕೆಶಿ ಅವರ ಸುಮಾರು 110 ಕೋಟಿ ರೂ. ಆಸ್ತಿಯನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಬೇನಾಮಿ ಆಸ್ತಿ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರಕರಣದ ಆರೋಪ ಸಾಬೀತಾದರೆ ಬೇನಾಮಿ ಆಸ್ತಿ ತಿದ್ದುಪಡಿ ಕಾಯ್ದೆ 53(2) ನ ಅನ್ವಯ ಕನಿಷ್ಠ 1 ವರ್ಷದಿಂದ ಗರಿಷ್ಠ 7 ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಗೂ ಮುನ್ನಾ ಈ ರೀತಿ ನಡೆಯುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿವೆ.
Comments