ದಿನೇಶ್ ಗುಂಡೂರಾವ್ ಮಾತಿಗೆ ಸಖತ್ತಾಗೆ ಟಾಂಗ್ ಕೊಟ್ಟ ಸೂಪರ್ ಸಿಎಂ ಎಚ್.ಡಿ. ರೇವಣ್ಣ..!!

ದೋಸ್ತಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದನ್ನು ಪತನಗೊಳಿಸಲು ಸಾಕಷ್ಟು ಕುತಂತ್ರಗಳು ನಡೆದವು.. ಈಗಾಗಲೇ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿದ್ದು, ಈ ನಡುವೆ ಖಾತೆ ಹಂಚಿಕೆ, ನಿಗಮ ಮಂಡಳಿಗಳಿಗೆ ನೇಮಕಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಒಳಗೊಳಗೆ ಕಾದಾಟ ಪ್ರಾರಂಭವಾಗಿದ್ದು, ದಿನೇಶ್ ಗುಂಡೂರಾವ್ ಹಾಗೂ ಎಚ್.ಡಿ. ರೇವಣ್ಣ ಇಬ್ಬರೂ ಕೂಡ ಬಹಿರಂಗವಾಗಿ ಕಾದಾಟಕ್ಕೆ ನಿಂತು ಬಿಟ್ಟಿದ್ದಾರೆ.. ಜೆಡಿಎಸ್ ಖಾತೆಗೆ ಸಂಬಂಧ ಪಟ್ಟಂತೆ ಇಲಾಖೆ ವ್ಯಾಪ್ತಿಯಲ್ಲಿರುವ ನಿಗಮ- ಮಂಡಳಿಗಳಲ್ಲಿ ಕಾಂಗ್ರೆಸ್ ಶಾಸಕರಿಗೆ ಅವಕಾಶ ನೀಡಿರುವುದರ ಬಗ್ಗೆ ಸಿಎಂ ಸಹೋದರ ಸಚಿವ ಎಚ್.ಡಿ. ರೇವಣ್ಣ ಸಿಟ್ಟಾಗಿದ್ದಾರೆ. ಶುಕ್ರವಾರ ಕೆಪಿಸಿಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಣ್ಣನವರು ಬಹಿರಂಗವಾಗಿ ಮಾತನಾಡಬಾರದು, ನಾನು ಅವರಿಗೆ ಸಲಹೆ ನೀಡುತ್ತೇನೆ ಎಂದು ತಿಳಿಸಿದರು..
ಇದೇ ಸಮಯದಲ್ಲಿ ದಿನೇಶ್ ಅವರ ಮಾತಿಗೆ ಎದುರು ಉತ್ತರವನ್ನು ನೀಡಿರುವ ಹೆಚ್.ಡಿ ರೇವಣ್ಣ ನಿಗಮ ಮಂಡಳಿ ನೇಮಕಾತಿ ಸಿಎಂಗೆ ಸಂಬಂಧಿಸಿದ ಕೆಲಸ, ನಾನು ಯಾವುದೇ ನಿಗಮ ಮಂಡಳಿ ನೇಮಕಾತಿ ಮಾಡಿ ಅಂತಾ ಅರ್ಜಿ ಹಿಡಿದುಕೊಂಡು ಹೋಗಿಲ್ಲ. ಇವರಿಂದ ಎಚ್ಚರಿಕೆ ಬುದ್ಧಿ ಹೇಳಿಸಿಕೊಳ್ಳಬೇಕಾಗಿಲ್ಲ ಎಂದು ಹೇಳಿದ್ದಾರೆ. ನನಗೆ ಅಂತಾ ಹೇಳುವುದಕ್ಕೆ ದೇವೇಗೌಡರು ಇದ್ದಾರೆ, ಕುಮಾರಸ್ವಾಮಿ ಇದ್ದಾರೆ. ನನಗೆ ಎಚ್ಚರಿಕೆ ಕೊಡೋಕೆ ಇವರ್ಯಾರು ಎಂದು ರೇವಣ್ಣ ಕಿಡಿಕಾರಿದರು. ಮೊದಲು ಕಾಂಗ್ರೆಸ್ ಪಕ್ಷದ ಶಾಸಕರನ್ನು ಅವರು ಹತೋಟಿಯಲ್ಲಿ ಇಟ್ಟುಕೊಳ್ಳಲಿ. ನಮ್ಮನ್ನು ಹತೋಟಿಗೆ ತರುವ ಅಗತ್ಯ ಅವರಿಗಿಲ್ಲ. ಹೀಗಾಗಿ ನಮಗೆ ಹೇಳುವ ಅವಶ್ಯಕತೆ ಇಲ್ಲ. ಅವರು ನನಗೆ ಸಲಹೆ ಕೊಡುವ ಅಗತ್ಯನೂ ಎಂದು ಹೆಚ್ ಡಿ ರೇವಣ್ಣ ಕಿಡಿ ಕಾರಿದ್ದಾರೆ.. ಒಟ್ಟಾರೆಯಾಗಿ ರಾಜಕಾರಣದಲ್ಲಿ ಇಷ್ಟೊಂದು ಒಳಜಗಳ, ಕಾದಾಟಗಳು, ನಡೆಯುತ್ತಲೆ ಇವೆ… ಅದಕ್ಕೆ ಅನ್ನಿಸುತ್ತದೆ ರಾಜಕೀಯವನ್ನು ದೊಂಬರಾಟ ಎನ್ನುವುದು.
Comments