ಮೋದಿ ಬೆನ್ನಿಗೆ ನಿಲ್ಲಬೇಕಾದವರೇ ಚೂರಿ ಹಾಕಿದ್ರಾ...!!!
ಅದ್ಯಾಕೋ ದೇಶದಲ್ಲಿ ಮೋದಿ ಅಲೆ ಕಡಿಮೆಯಾದಂತಿದೆ. ಒಂದು ಕಡೆ ಮೋದಿ ಬೆಂಬಲಿಗರ ಸಾಲು ಸಾಲು ಸೋಲು, ಇದಕ್ಕೆಲ್ಲಾ ಕಾರಣವೆಂಬಂತೆ ಮತ್ತೊಂದು ಕಡೆ ದೇಶದ ಪ್ರಧಾನಿ ಕಡೆ ಎಲ್ಲರ ಬೆರಳು, ಇವುಗಳ ನಡುವೆ ಬಿಜೆಪಿ ಕುಗ್ಗಿದಂತಿದೆ ಕಾಣುತ್ತಿದೆ. ಅಷ್ಟೇ ಅಲ್ಲಾ ಇದರ ನಡುವೆಯೇ ಕೆಲ ಬೆಜೆಪಿ ಪಾಳಯದ ಸಂಸದರೇ ಮಾತಿನ ಚೂರಿ ಚುಚ್ಚುತ್ತಿದ್ದಾರೆ. ಮೋದಿಗೆ ವಾಕ್ಚತುರ್ಯದಿಂದ ಎಂಥವರನ್ನು ಸೆಳೆಯುವ ಕಲೆ ಗೊತ್ತಿತ್ತು ಎನ್ನುತ್ತಿದ್ದವರು ಇದೀಗ ಅವರೊಬ್ಬ ನಾಟಕಕಾರ ಎನ್ನುತ್ತಿದ್ದಾರೆ. ಒಂದು ಕಡೆ ವಿರೋಧ ಪಕ್ಷದವರ ಜೊತೆ ಸೆಣೆಸುತ್ತಿರುವ ಪ್ರಧಾನಿ ಮೋದಿಗೆ ತನ್ನವರಿಂದಲೇ ಹಿಯಾಳಿಕೊಳ್ಳುವ ಸ್ಥಿತಿ ಬಂದಿದೆ ಎಂಬುದು ಇತ್ತೀಚಿನ ಸಮೀಕ್ಷೆಗಳು ವರದಿ. ಅದೇನೇ ಇರಲಿ ಸದ್ಯ ಬಿಜೆಪಿ ಪಕ್ಷದ ಸಂಸದ ಶತ್ರುಘ್ನ ಸಿನ್ಹಾ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿರುವ ಟ್ವೀಟ್ ವೈರಲ್ ಆಗಿದ್ದು. ಬಿಜೆಪಿ ಪಕ್ಷದಲ್ಲಿದೇ ಭಿನ್ನಾಭಿಪ್ರಾಯಗಳು ಸ್ಫೋಟಿಸುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷದ ಮೊದಲ ದಿನ ಎಎನ್‌ಐಗೆ ನೀಡಿದ ಸಂದರ್ಶನವನ್ನು "ಪೂರ್ವನಿಯೋಜಿತ, ಸಾಕಷ್ಟು ಪೂರ್ವ ತಯಾರಿ ನಡೆಸಿಕೊಂಡ ಮತ್ತು ರಿಹರ್ಸಲ್ ಮಾಡಿದ ಸಂದರ್ಶನ" ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಲೇವಡಿ ಮಾಡಿದ್ದಾರೆ. ಜತೆಗೆ ಈ ಹಿಂದಿನ ಪ್ರಧಾನಿಗಳಂತೆ ಪತ್ರಿಕಾಗೋಷ್ಠಿ ನಡೆಸಿ, ಪೂರ್ವನಿರ್ಧರಿತವಲ್ಲದ ಪ್ರಶ್ನೆಗಳನ್ನು ಎದುರಿಸಿ" ಎಂದು ಸವಾಲು ಹಾಕಿದ್ದಾರೆ."ಮಾನ್ಯರೇ ನಿಮ್ಮ ಉತ್ತಮವಾಗಿ ಬರೆದ, ಕೊರಿಯೊಗ್ರಾಫ್ ಮಾಡಿದ, ಪೂರ್ವನಿರ್ಧರಿತ ಪ್ರಶ್ನೆಗಳ, ರಿಹರ್ಸಲ್ ಮಾಡಿದ ಟಿವಿ ಸಂದರ್ಶನವನ್ನು ಸೋಮವಾರ ಸಂಜೆ ನೋಡಿದ್ದೇವೆ. ನಿರೂಪಕಿ ಅದ್ಭುತ ಮಹಿಳೆ ಸ್ಮಿತಾ ಪ್ರಕಾಶ್ ಬಗ್ಗೆ ಗೌರವಪೂರ್ವಕ ಮಾತುಗಳನ್ನಾಡುತ್ತಾ, ಪತ್ರಿಕಾಗೋಷ್ಠಿಯಲ್ಲಿ ಪೂರ್ವನಿರ್ಧರಿತವಲ್ಲದ ಪ್ರಶ್ನೆಗಳನ್ನು ಎದುರಿಸುವ ಮೂಲಕ ಸಮರ್ಥ ಹಾಗೂ ಬುದ್ಧಿವಂತ ಪ್ರಧಾನಿ ಎನಿಸಿಕೊಳ್ಳಲು ಇದೀಗ ಸುಸಂದರ್ಭ" ಎಂದು ಸರಣಿ ಟ್ವೀಟ್‌ಗಳಲ್ಲಿ ಲೇವಡಿ ಮಾಡಿದ್ದಾರೆ.
"ನೀವು ಅವರನ್ನು ಎದುರಿಸಲು ಬಯಸುವುದಿಲ್ಲ ಎನ್ನುವುದು ಗೊತ್ತು; ಆದರೆ ಕನಿಷ್ಠಪಕ್ಷ ಮುತ್ಸದ್ದಿ ರಾಜತಾಂತ್ರಿಕ ಯಶವಂತ್ ಸಿನ್ಹಾ, ಅನುಭವಿ ಪತ್ರಕರ್ತ ಅರುಣ್ ಶೌರಿ ಅವರಂಥ ವ್ಯಕ್ತಿಗಳ ಪ್ರಶ್ನೆಗಳಿಗಾದರೂ ಉತ್ತರಿಸುವ ಧೈರ್ಯ ತೋರಿಸಿ" ಎಂದು ಚುಚ್ಚಿದ್ದಾರೆ.ಮೋದಿಯವರು ಸಂದರ್ಶನದಲ್ಲಿ ತೀರಾ ಸ್ಥಿತಪ್ರಜ್ಞನಂತೆ ಕಂಡುಬಂದರೂ, ಹಿಂದಿನ ಪ್ರದರ್ಶನಗಳಿಗೆ ಹೋಲಿಸಿದರೆ ಅಷ್ಟೊಂದು ಮನಸೆಳೆಯುವಂತಿರಲಿಲ್ಲ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.ಮೋದಿ ಸರ್ಕಾರ ಬಗ್ಗೆ ಈಗಾಗಲೇ ದೇಶಾದ್ಯಂತ ಭಾರೀ ಸುದ್ದಿಯಾಗಿದ್ದು, ಶತೃಘ್ನ ಸಿನ್ಹಾ ಅವರು ತಮ್ಮ ಟ್ವೀಟ್ ಮೂಲಕ ಬಿಜೆಪಿ ಪಕ್ಷದ ಒಡಕುಗಳನ್ನು ಬಹಿರಂಗ ಮಾಡಿದ್ದಾರೆ ಎನ್ನಬಹುದು. ಲೋಕಸಭಾ ಚುನಾವಣೆ ಹತ್ತಿರುವಾಗುತ್ತಿದ್ದಂತೇ ಬಿಜೆಪಿ ಭದ್ರಕೋಟೆಯಲ್ಲಿ ತೂತುಗಳು ಕಾಣಿಸಿಕೊಳ್ಳುತ್ತಿದ್ದು ಮುಂದಿನ ಭವಿಷ್ಯ ಬಗ್ಗೆ ಭಾರೀ ಕುತೂಲ ಮೂಡಿಸಿದೆ.
Comments