'ಜಾಡಿಸಿ ಒದಿಬೇಕು, ಹುಚ್ಚರು ನೀವು' ಎಂದು ಮಾಧ್ಯಮದವರ ಮೇಲೆ ಗರಂ ಆದ ‘ಕೈ’ ಶಾಸಕ..!!
ರಾಜಕೀಯ ನಾಯಕರಿಗೂ ಮಾಧ್ಯಮದವರಿಗೂ ಪ್ರತೀ ನಿತ್ಯ ಜಟಾಪಟಿ ಇದ್ದುದ್ದೇ. ಆದರೆ ಮಾಧ್ಯಮಹಕ್ಕನ್ನು, ಅಥವಾ ಪರ್ತಕರ್ತರ ಹಕ್ಕನ್ನು ಹರಣ ಮಾಡುವ ಹಕ್ಕು ಯಾರಿಗೂ ಇಲ್ಲ. ಈ ಹಿಂದೆ ಅನೇಕ ರಾಜಕೀಯ ನಾಯಕರು ಮೀಡಿಯಾದವರನ್ನು ಹಿಯಾಳಿಸಿ ಮಾತನಾಡಿದ್ದಕ್ಕೆ ಬೆಲೆತೆತ್ತಬೇಕಾಯ್ತು. ಇದೀಗ ದೋಸ್ತಿ ಸರ್ಕಾರದ ಪ್ರಮುಖರ ಸಾಲಿನಲ್ಲಿ ಗುರುತಿಸಿಕೊಂಡವರ ಸರದಿ. ಅಂದಹಾಗೇ ರಮೇಶ್ ಜಾರಕಿಹೊಳಿ ಅವರು ಮಾಧ್ಯಮದವರನ್ನು ಅವಾಚ್ಯ ಶಬ್ಧಗಳಲ್ಲಿ ನಿಂಧಿಸಿರುವ ಘಟನೆ ವೈರಲ್ ಆಗಿದ್ದು, ಮೀಡಿಯಾದವರ ಮುಂದೆಯೇ ಸಿಕ್ಕಾಪಟ್ಟೆ ರಾಂಗ್ ಆಗಿದ್ದಾರೆ.
'ಒದಿಯಬೇಕು ನಿಮ್ಮನ್ನ ಜಾಡಿಸಿ ಒದಿಯಬೇಕು. ಹುಚ್ಚರು ಇದ್ದೀರಿ ನೀವು, ಅತಿಯಾಯ್ತು ನಿಮ್ದು' ಹೀಗಂತ ಹೇಳಿದ್ದು ದೋಸ್ತಿಸರಕಾರದ ಸಚಿವ ಸಂಪುಟ ರಮೇಶ್ ಜಾರಕಿಹೋಳಿಯವರು.
ಅಂದಹಾಗೇ ದೋಸ್ತಿ ಸರ್ಕಾರ ರಚನೆಯಾದ ನಂತರ ಒಂದಿಷ್ಟು ದಿನ ಕಣ್ಮರೆಯಾಗಿದ್ದ ರಮೇಶ್ ಜಾರಕಿಹೋಳಿ ಇದ್ದಕ್ಕಿದ್ದ ಹಾಗೇ ದಿಢೀರ್ ಅಂತಾ ಆಟದ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇಂದು ಬೆಳ್ಳಂ ಬೆಳಗ್ಗೆ ಗೋಕಾಕ್ಮಿಲ್ನಲ್ಲಿರುವ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಡಿ ನಿವಾಸಕ್ಕೆ ಹಿಂದಿರುಗುವಾಗ ಮಾಧ್ಯಮದವರ ಕಣ್ಣಿಗೆ ಬಿದ್ದಿದ್ದಾರೆ.ಇದೇ ವೇಳೆ ಅವರ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ಪ್ರತಿಕ್ರಿಯೆ ಕೇಳಲು ಮುಂದಾದ ಮಾಧ್ಯಮದವರ ಮೇಲೆ ರಮೇಶ್ ಅವರು ಹೌ ಹಾರಿದ್ದು, ಕಾರಿನಿಂದ ಇಳಿಯುತ್ತಿದ್ದಂತೆ ಮಾಧ್ಯಮದವರಿಗೆ ನಿಮಗೆ 'ಜಾಡಿಸಿ ಒದಿಬೇಕು, ಹುಚ್ಚರು ನೀವು' ಹೇಳಿ ಮನೆಯೊಳಗೆ ತೆರಳಿದರು. ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಳ್ಳುವ ಯಾವ ವ್ಯಕ್ತಿಗೂ ಈ ರೀತಿ ಮಾತನಾಡುವುದು ಸೌಜನ್ಯವಲ್ಲ. ಅಷ್ಟೇ ಅಲ್ಲಾ, ಮಾಧ್ಯಮ ಸರ್ಕಾರದ ನಾಲ್ಕನೇ ಅಂಗ, ಸಾರ್ವಜನಿಕ ಪ್ರತಿನಿಧಿಯಾಗಿರುವ ಇವರು ಇಂತಹ ಭಾಷೆ ಬಳಸುವುದು ಅವರ ಗೌರವಕ್ಕೆ ಧಕ್ಕೆ ತರುವುದು ಎಂದು ವ್ಯಾಪಕ ವಿರೋಧ ವ್ಯಕ್ತವಾಗಿದೆ.
Comments