ಆಪರೇಷನ್ ಕಮಲದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ‘ಕೈ’ ಮುಖಂಡರು..!!

ಸಚಿವ ಸಂಪುಟ ವಿಸ್ತರಣೆ ಆದ ನಂತರ ದೋಸ್ತಿ ಸರ್ಕಾರದ ನಡುವೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ..ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿರುವ ನಡುವೆಯೇ ಬಿಜೆಪಿಯವರು ಆಪರೇಷನ್ ಕಮಲಕ್ಕೆ ಮುಂದಾಗಿರುವ ವಿಷಯ, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ., ಇದರ ಮಧ್ಯೆ ತಮಗೆ ಬಿಜೆಪಿ ಮುಖಂಡರು ಕರೆ ಮಾಡಿ ಗಾಳ ಹಾಕುತ್ತಿದ್ದಾರೆ ಎಂದು ಹೈದರಾಬಾದ್ ಕರ್ನಾಟಕದ ಕಾಂಗ್ರೆಸ್ ಶಾಸಕರಿಬ್ಬರು ಹೇಳಿಕೊಂಡಿದ್ದಾರೆ. ಈ ನಡೆವೆ ರಾಜಕೀಯದಲ್ಲಿ ಯಾವ್ಯಾವ ರೀತಿಯ ವಾತವರಣ ಸೃಷ್ಟಿಯಾಗುತ್ತದೋ ಗೊತ್ತಿಲ್ಲ.. ರಾಜಕೀಯ ೆಂಬುದು ದೊಂಬರಾಟ ಎನ್ನುತ್ತಿದಿದ್ದು ಇದನ್ನ ನೋಡಿದ ಮೇಲೆ ನಿಜ ಅನಿಸುತ್ತದೆ..
ಬಿಜೆಪಿಯವರು ತಮ್ಮನ್ನು ಸಂಪರ್ಕಿಸಿದ್ದಾರೆಂದು ಚಿಂಚೋಳಿಯ ಶಾಸಕ ಡಾ.ಉಮೇಶ್ ಜಾಧವ ಹಾಗೂ ಅಫಜಲ್ಪುರ ಶಾಸಕ ಎಂ.ವೈ. ಪಾಟೀಲ್ ಹೇಳಿದ್ದಾರೆ. ಅಲ್ಲದೆ ತಮ್ಮನ್ನು ಸಂಪರ್ಕಿಸಿದವರಿಗೆ ತಾವು ತಕ್ಕ ಉತ್ತರ ನೀಡಿದ್ದಾಗಿ ಹೇಳುವ ಮೂಲಕ ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಒಟ್ಟಾರೆ ರಾಜಕೀಯದಲ್ಲಿ ಸಾಕಷ್ಟು ಭಿನ್ನಮತಗಳು ಎದ್ದಿದ್ದು ಯಾವಾಗ ಏನು ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆ ಪಕ್ಷದಿಂದ ಈ ಪಕ್ಷಕ್ಕೆ … ಹಾರಾಡುತ್ತಿದ್ದವರು ಇದೀಗ ಎಲ್ಲಾ ಬಿಟ್ಟು ಸುಮ್ಮನೆ ಇದ್ದು ಬಿಡೋಣ ಎನ್ನುವಂತೆ ಆಗಿ ಬಿಟ್ಟಿದ್ದಾರೆ..
Comments