ಜೆಡಿಎಸ್ ಗೆ ಬಿಗ್ ಶಾಕ್: ರಾಜಿನಾಮೆಗೆ ಮುಂದಾದ ಜೆಡಿಎಸ್ ಶಾಸಕ..!!
ಸ್ವಲ್ಪ ದಿನಗಳ ಹಿಂದಿನಿಂದಲೂ ಕೂಡ ಜೆಡಿಎಸ್ ರಾಜ್ಯಾಧ್ಯಕ್ಷರಾದ ವಿಶ್ವನಾಥ್ ಅವರ ಹುದ್ದೆಗೆ ರಾಜಿನಾಮೆ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.. ಜೆಡಿಎಸ್ನ ರಾಜ್ಯಾಧ್ಯಕ್ಷ ಹುದ್ದೆಗೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಬದಲಿಗೆ ಅನಾರೋಗ್ಯದ ಕಾರಣದ ಹಿನ್ನೆಲೆಯಲ್ಲಿ ನನ್ನನ್ನು ಹುದ್ದೆಯಿಂದ ಬಿಡುಗಡೆ ಮಾಡಿ ಎಂದು ರಾಷ್ಟ್ರಾಧ್ಯಕ್ಷ ದೇವೇಗೌಡರ ಬಳಿ ಮನವಿ ಮಾಡಿಕೊಳ್ಳುವುದಕ್ಕೆ ಮುಂದಾಗಿರುವೆ ಆಂತ ಜೆಡಿಎಸ್ನ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಜೀವನದ ಸಂಧ್ಯಾ ಕಾಲದಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಲು ಅವರು ಸಹಾಯ ಮಾಡಿದ್ದಾರೆ. ದೇವೇಗೌಡರು ಹಿರಿಯರು. ಹೆಚ್ಚು ಅನುಭವ ಹೊಂದಿದವರು ಅವರು ಹೇಳಿದಂತೆಯೇ ಕೇಳುತ್ತೇನೆ. ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ನನ್ನನ್ನು ಸಮರ್ಥ ಎಂದೇ ಹೇಳುತ್ತಿರುವ ಅವರದ್ದು ವಿಶಾಲ ಮನೋಭಾವ ಅಂತ ಹೇಳಿದರು. ಇನ್ನು ಪಕ್ಷದ ಸಂಘಟನೆ ಮಾಡಲು ನನ್ನ ಆರೋಗ್ಯ ಸ್ಪಂದಿಸುತ್ತಿಲ್ಲ. ಹಾಗಾಗಿ ಜವಾಬ್ದಾರಿಯಿಂದ ವಿಮುಕ್ತನನ್ನಾಗಿ ಮಾಡಿ ಎಂದು ದೇವೇಗೌಡರಲ್ಲಿ ಜ.3ರಂದು ಕೋರಿಕೆ ಸಲ್ಲಿಸಲು ತೀರ್ಮಾನಿಸಿದ್ದೇನೆ. ಅವರು ಸೂಚಿಸಿದಂತೆ ನಡೆಯುತ್ತೇನೆ ಅಂತ ವಿಶ್ವನಾಥ್ ತಿಳಿಸಿದ್ದಾರೆ..
Comments