ಲೋಕಸಭಾ ಚುನಾವಣೆಗೆ ಎಂಟ್ರಿ ಕೊಟ್ಟ ಬಹುಭಾಷ ನಟ..!! ಯಾರು ಯಾವ ಪಕ್ಷ ಗೊತ್ತಾ..!?

ಹೊಸ ವರ್ಷವನ್ನು ಎಲ್ಲರು ತುಂಬಾ ಸಂತೋಷದಿಂದ ಬರಮಾಡಿಕೊಂಡಿದ್ದಾರೆ.ಅದೇ ರೀತಿ ಬಹುಭಾಷಾ ನಟ ಪ್ರಕಾಶ್ ರೈ ಹೊಸ ವರ್ಷಕ್ಕೆ ಹೊಸ ಹೆಜ್ಜೆಯನ್ನುಇರಿಸಿದ್ದು, ತಾನು ರಾಜಕೀಯಕ್ಕೆ ಕಾಲಿಡುವುದಾಗಿ ಹೇಳಿಕೊಂಡಿದ್ದಾರೆ. ಹೊಸ ವರ್ಷದ ಶುಭಾಷಯಗಳನ್ನು ತಿಳಿಸಿ ಮಾಡಿರುವಂತಹ ಟ್ವೀಟ್‌ನಲ್ಲಿ ತಮ್ಮ ಈ ಹೊಸ ನಿರ್ಧಾರವನ್ನು ಬರೆದುಕೊಂಡಿದ್ದಾರೆ..
ಹೊಸ ವರ್ಷದ ಹಿನ್ನಲೆಯಲ್ಲಿ ಇಂದು ಮಧ್ಯರಾತ್ರಿ 12 ಗಂಟೆಗೆ ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್ 'ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು. ಹೊಸ ಆರಂಭ, ಹೊಸ ಜವಾಬ್ದಾರಿ... ನಿಮ್ಮ ಬೆಂಬಲದೊಂದಿಗೆ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ. ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಮಾಹಿತಿಯನ್ನು ಶೀಘ್ರದಲ್ಲೇ ನೀಡುತ್ತೇನೆ ಎಂದು ತಿಳಿಸಿದ್ದಾರೆ.
Comments