ರಾಜ್ಯದಲ್ಲಿನ ಟಾಪ್ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸಿಎಂ ಕುಮಾರಸ್ವಾಮಿಗೆ ಮೊದಲ ಸ್ಥಾನ..! ಕಾರಣ ಏನ್ ಗೊತ್ತಾ..?
ರಾಜಕೀಯ ವಲಯದಲ್ಲಿ ಸಿಎಂ ಕುಮಾರಸ್ವಾಮಿ ಅವರದ್ದು ಪ್ರತಿತಂತ್ರದ ರಾಜಕಾರಣ ಆಗಿರಬಹುದು. ಆದರೆ ಮಾನವೀಯತೆ ಅಂತ ಬಂದ ಮೇಲೆ ಅವರದ್ದು ಎತ್ತಿದ್ದ ಕೈ.. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾನವೀಯತೆಯಲ್ಲಿ ರಾಜ್ಯದ ಟಾಪ್ ಸಿಎಂ ಆಗಿದ್ದು, ಸಿಎಂ ಪರಿಹಾರ ನಿಧಿಯಿಂದ ದಾಖಲೆಯ ಸಹಾಯ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.
ಆದರೆ ಮಾನವೀಯತೆಯಲ್ಲಿ ಮಾತ್ರ ಕುಮಾರಸ್ವಾಮಿ ಅಪ್ಪಟ ಚಿನ್ನ ಎಂದರೆ ನಿಜಕ್ಕೂ ತಪ್ಪಾಗಲಾರದು. ಕುಮಾರಸ್ವಾಮಿ ಅವರು ಕಷ್ಟ ಅಂತ ಬಂದವರನ್ನು ಯಾವತ್ತು ಸುಮ್ಮನೆ ಕಳಿಸಿಲ್ಲ…. ಆರೋಗ್ಯ ಸಮಸ್ಯೆ ಅಂದರೆ ಸಾಕು ಹೇಗಾದರೂ ಮಾಡಿ ಸಹಾಯ ಮಾಡೇ ಮಾಡುತ್ತಾರೆ. ಇಂತಹ ಸಮಸ್ಯೆಗೆ ಸಹಾಯ ಮಾಡಲು ಇರುವ ಮುಖ್ಯಮಂತ್ರಿ ಪರಿಹಾರ ನಿಧಿಯನ್ನ ಸಿಎಂ ಕುಮಾರಸ್ವಾಮಿ ಹಿಂದಿನ ಎಲ್ಲಾ ಸಿಎಂಗಳಿಗಿಂತ ಹೆಚ್ಚು ಬಳಸಿದ್ದಾರೆ. ಸಿಎಂ ಆಗಿ 6 ತಿಂಗಳಲ್ಲೇ ಬರೋಬ್ಬರಿ 28 ಕೋಟಿ ಹಣ ಸಹಾಯವನ್ನ ನೊಂದವರಿಗಾಗಿ ಸಹಾಯ ಮಾಡಿದ್ದಾರೆ.
Comments