ಬಿಜೆಪಿಗೆ ಮತ್ತೊಂದು ಬಿಗ್ ಶಾಕ್ : ಕೈ ಕೊಡ್ತಾ ಮೈತ್ರಿ ಪಕ್ಷ..!!

ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷದವರು ಸಿದ್ದತೆಯನ್ನು ನಡೆಸಿಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಒಂದರ ಮೇಲೊಂದು ಹಿನ್ನಡೆ ಎದುರಾಗುತ್ತಿದೆ ಎನ್ನಲಾಗುತ್ತಿದೆ. NDA ಮತ್ತೊಂದು ಮೈತ್ರಿಪಕ್ಷವಾದ ಅಪ್ನಾ ದಳ್ ಮುಖಂಡರು ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಹಾಜರಾಗದಿರಲು ನಿರ್ಧಾರ ಮಾಡಿದೆಯಂತೆ.
ಬಿಜೆಪಿ ಮುಖಂಡರ ವರ್ತನೆಯಿಂದ ಬೇಸತ್ತು ಮೋದಿ ಅವರ ವಾರಣಾಸಿ ಹಾಗೂ ಘಾಜಿಪುರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ತೀರ್ಮಾನ ಮಾಡಿದ್ದಾರೆ. ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಪಕ್ಷವಾದ ಅಪ್ನಾ ದಳ್ ಮುಖಂಡರು ಈ ಮೂಲಕ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಧ್ಯ ಪ್ರವೇಶಿಸಿ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎನ್ನುವ ನಂಬಿಕೆ ಇದೆ, ಪಕ್ಷಗಳ ನಡುವೆ ಇರುವ ಅಸಮಾಧಾನ ಶೀಘ್ರ ಶಮನವಾಗಲಿದೆ ಎಂದು ಭರವಸೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Comments