ಮಗನ ವಿರುದ್ದ ಸಿಟ್ಟಿಗೆದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ..!! ಕಾರಣ ಏನ್ ಗೊತ್ತಾ..?

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮಗನಾದ ಬಿ.ವೈ ರಾಘವೇಂಧ್ರ ಅವರ ವಿರುದ್ದ ಗರಂ ಆಗಿದ್ದಾರೆ. ದಕ್ಷಿಣ ಭಾರತದ ಬಿಜೆಪಿ ಸಂಸದರು, ರಾಜ್ಯಾಧ್ಯಕ್ಷರ ಸಭೆ ರದ್ದಾದ ಮಾಹಿತಿ ನೀಡದ ಸಂಸದ, ಮಗ ಬಿ.ವೈ ರಾಘವೇಂದ್ರ ಮೇಲೆ ಬಿ.ಎಸ್. ಯಡಿಯೂರಪ್ಪ ಫುಲ್ ಗರಂ ಆಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಇಂದು ದೆಹಲಿಯಲ್ಲಿ ಸಭೆ ನಿಗದಿಯಾಗಿತ್ತು, ಆದರೆ ಕೆಲ ಕಾರಣಗಳಿಂದ ಸಭೆ ರದ್ದಾಗಿತ್ತು. ಸಭೆ ರದ್ದಾದ ವಿಚಾರ ನಿನ್ನೆಯೇ ರಾಘವೇಂದ್ರ ಅವರಿಗೆ ಗೊತ್ತಿತ್ತು, ಆದರೂ ಈ ವಿಷಯವನ್ನು ಬಿಎಸ್ ವೈ ಗೆ ತಲುಪಿಸುವಲ್ಲಿ ವಿಫಲವಾಗಿದ್ದರು, ಹಾಗಾಗಿ ಬಿಎಸ್ ವೈ, ಮೊದಲೇ ವಿಷಯ ತಿಳಿಸಿದ್ದರೆ ನಾನು ಬೆಂಗಳೂರಿನಿಂದ ದೆಹಲಿಗೆ ಬರುತ್ತಿರಲಿಲ್ಲ. ಸರಿಯಾಗಿ ಸಂವಹನ ಮಾಡುವುದಕ್ಕೆ ಆಗಲ್ವಾ ಎಂದು ಗರಂ ಆಗಿದ್ದಾರೆ.
Comments