ಡಾ.ಜಿ ಪರಮೇಶ್ವರ್ ಗೆ ಒಲಿಯಿತು ಮತ್ತೊಂದು ಖಾತೆ..!

ವಿಧಾನಸಭಾ ಚುನಾವಣೆ ಮುಗಿದ ಫಲಿತಾಂಶ ಹೊರಬಂದ ಮೇಲೆ ಸಮ್ಮಿಶ್ರ ಸರ್ಕಾರ ರಚನೆಯಾಗಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ಡಾ. ಜಿ ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾದರು. ಈ ನಡುವೆ ಅವರಿಗೆ ಗೃಹ ಖಾತೆಯನ್ನು ನೀಡಲಾಗಿತ್ತು. ಸಚಿವ ಸಂಪುಟ ವಿಸ್ತರಣೆಯ ವೇಳೆ ದೋಸ್ತಿ ಪಕ್ಷಗಳ ನಡುವೆಯೇ ಒಂದಿಷ್ಟು ಭಿನ್ನಮತಗಳು ಬಂದರೂ ಕೂಡ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸಮಾಧಾನದಿಂದ ಸರ್ಕಾರ ನಡೆದುಕೊಂಡು ಹೋಗುತ್ತಿದೆ.
ಇದೀಗ ಡಾ. ಜಿ. ಪರಮೇಶ್ವರ್ ಅವರು ಗೃಹ ಖಾತೆಯನ್ನು ಕಳೆದುಕೊಂಡಿದ್ದು, ಅದರ ಬದಲಾಗಿ ಅವರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಿಕ್ಕಿದೆ.ಸದ್ಯ ಪರಮೇಶ್ವರ್ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೂ ಉಳಿಸಿಕೊಂಡಿದ್ದು, ಕಾನೂನು ಸಂಸದೀಯ ಖಾತೆಯನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ಬದಲಾಗಿ ಅವರು ಗೃಹ ಹಾಗೂ ಯುವಜನ ಮತ್ತು ಕ್ರೀಡಾ ಖಾತೆಯನ್ನು ಕಳೆದುಕೊಂಡಿದ್ದಾರೆ.ಅತ್ಯಂತ ಪ್ರಭಾವಿ ಖಾತೆ ಬೇಕೆಂದು ಹೊಸ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಸತೀಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದರು, ಆದರೆ ತಮ್ಮ ಖಾತೆ ಬಿಟ್ಟುಕೊಡಲು ಪರಮೇಶ್ವರ್ ಒಪ್ಪಿರಲಿಲ್ಲ. ಆದರೆ ಕಡೆಯ ಕ್ಷಣದಲ್ಲಿ ಗೃಹ ಖಾತೆ ಎಂ.ಬಿ.ಪಾಟೀಲ್ ಗೆ ನೀಡಲಾಯಿತು ಎನ್ನಲಾಗಿದೆ.
Comments