ಕೆಜಿಎಫ್ ಕಿಂಗ್ ಮಂಡ್ಯ ಲೋಕಸಭಾ ಅಖಾಡಕ್ಕೆ..!!?
ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಯಶಸ್ಸಿನ ಸಾಲಿನಲ್ಲಿ ಸಾಗುತ್ತಿದೆ. ಇದೀಗ ಕೆಜಿಎಫ್ ನಿರ್ದೇಶಕ ವಿಜಯ್ ಕಿರಗಂದೂರ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಜಯ್ ರವರು ಮಂಡ್ಯದವರು. ಮಂಡ್ಯ ನಗರಕ್ಕೆ ಹತ್ತಿರವಿರುವ ಕಿರಗಂದೂರು ವಿಜಯ್ ಸ್ವಗ್ರಾಮ. ಮಲ್ಲೇಶ್ವರಂ ಬಿಜೆಪಿ ಶಾಸಕ ಅಶ್ವತ್ ನಾರಾಯಣ್ ಅವರ ಹತ್ತಿರದ ಸಂಬಂಧಿ ಆಗಿದ್ದಾರೆ. ಹಾಗಾಗಿ ಬಿಜೆಪಿ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈಗಾಗಲೇ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಬಿಜೆಪಿ ಮುಖಂಡರು ಹಾಗೂ ಆಪ್ತರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ.
Comments