ಸಂಪುಟ ವಿಸ್ತರಣೆಗೆ ಬಿಗ್ ಟ್ವಿಸ್ಟ್..!! ಸಚಿವ ಸ್ಥಾನಗಳ ಬಗ್ಗೆ ಡಿಕೆಶಿ ನೀಡಿದ ಹೊಸ ಸುಳಿವು..!!

ರಾಜಕೀಯದಲ್ಲಿ ಎಲ್ಲರಿಗೂ ಕೂಡ ಸಚಿವ ಸ್ಥಾನದ ಆಸೆಗಳು ಇದ್ದೆ ಇರುತ್ತವೆ. ಅದನ್ನು ತಪ್ಪೆಂದು ಯಾರು ಕೂಡ ಹೇಳಲಾಗುವುದಿಲ್ಲ. ಆದರೆ, ಪಕ್ಷ ಉಳಿದಾಗ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯವಾಗುತ್ತದೆ. ಎರಡು ವರ್ಷದ ಅವಧಿಗೆ ಸಚಿವ ಸ್ಥಾನ ನೀಡಲಾಗಿದೆ.
ಎರಡು ವರ್ಷದ ಬಳಿಕ ರೊಟೇಷನ್ ಮಾಡಲಾಗುತ್ತದೆ. ಅಲ್ಲಿಯವರೆಗೂ ಅಸಮಾಧಾನಗೊಂಡಿರುವ ಶಾಸಕರು ತಾಳ್ಮೆ ವಹಿಸಿಕೊಂಡು ಇರಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ 5 ವರ್ಷ ಸರ್ಕಾರ ನಡೆಸುವುದಕ್ಕೆ ಮಾತು ಕೊಟ್ಟಿದ್ದೇವೆ. ಇದನ್ನು ಅರ್ಥ ಮಾಡಿಕೊಂಡು ಮತ್ತು ಪಕ್ಷ ಇದ್ದರೆ ನಾವು ಎಂಬುದನ್ನು ತಿಳಿದುಕೊಳ್ಳಬೇಕು. ಪಕ್ಷದಲ್ಲಿ ಮೊದಲಿನ ಪರಿಸ್ಥಿತಿ ಇಲ್ಲದಿರುವುದರಿಂದ ಯಾವುದೇ ತ್ಯಾಗಕ್ಕೂ ಸಿದ್ಧರಿರಬೇಕು ಎಂದು ತಿಳಿಸಿದ್ದಾರೆ.
Comments