ದೋಸ್ತಿ ಸರಕಾರದಿಂದ ಈ ಸಚಿವರಿಗೆ ಗೇಟ್ ಪಾಸ್..!?

ಸಮ್ಮಿಶ್ರ ಸರ್ಕಾರದಲ್ಲಿ ಈಗಾಗಲೇ ಒಡಕು ಬಿರುಕುಗಳು ಕಾಣಿಸಿಕೊಂಡಿವೆ.. ಅರಣ್ಯ ಖಾತೆ ಪಡೆದುಕೊಂಡಿದ್ದ ಪಕ್ಷೇತರ ಶಾಸಕ ಶಂಕರ್ ಅವರನ್ನು ದೋಸ್ತಿ ಸರಕಾರದ ಸಚಿವ ಸಂಪುಟದಿಂದ ಗೇಟ್ ಪಾಸ್ ಅನ್ನು ನೀಡಲಾಗಿದೆ ಎನ್ನಲಾಗಿದೆ.ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಪುನರ್ ರಚನೆ ನಡೆಯುತ್ತಿರುವ, ಈ ವೇಳೆ ಕಾಂಗ್ರೆಸ್ ನಿಂದ ಹಲವು ಮಂದಿ ಶಾಸಕರ ಹೆಸರು ಕೇಳಿ ಬರುತ್ತಿವೆ.
ಈ ಸಮಯದಲ್ಲಿ ಅರಣ್ಯ ಸಚಿವರಾಗಿರುವ ಆರ್. ಶಂಕರ್ ಸ್ಥಾನಕ್ಕೆ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ಅವರು ನೇಮಕವಾಗಲಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ದೋಸ್ತಿ ಸರಕಾರ ರಚನೆಯಾಗುವ ವೇಳೆಯಲ್ಲಿ ಆರ್. ಶಂಕರ್ ಅವರು ಸಮ್ಮಿಶ್ರ ಸರಕಾರವನ್ನು ಬೆಂಬಲಿಸಿ ಅರಣ್ಯ ಸಚಿವರಾದರು.. ಹೀಗಾಗಿ ಶಂಕರ್ ಅವರನ್ನು ದೋಸ್ತಿ ಸರಕಾರದಿಂದ ಗೇಟ್ ಪಾಸ್ ನೀಡಲಾಗುತ್ತಿದೆ ಎನ್ನಲಾಗಿದೆ.
Comments