‘ಕಮಲ’ವನ್ನು ಅರಳಿಸಲು ಮುಂದಾದ್ರ ‘ಕೈ’ಶಾಸಕಿ..!! ಕೆಂಡಾಮಂಡಲವಾದ ಕಾಂಗ್ರೆಸ್..!!!
ಇಂದು ಸಂಜೆ ನೂತನ ಸಚಿವರ ಪ್ರಮಾಣ ವಚನವಿದ್ದು ಇದರ ಬೆನ್ನಲ್ಲೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಿಜೆಪಿ ಪರ ಟ್ವೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಾಲಮನ್ನಾ ಭರವಸೆ ಈಡೇರಿಸಲು ಸಾಧ್ಯವಾಗದೆ ಸುಳ್ಳು ಹೇಳುತ್ತಿರುವ ಸಿಎಂ ರಾಜೀನಾಮೆ ನೀಡಲಿ ಎಂಬ ಬಿಜೆಪಿ ಟ್ವೀಟ್’ಗೆ ಲಕ್ಷ್ಮಿ ಹೆಬ್ಬಾಳ್ಕರ್ ರೀ ಟ್ವೀಟ್ ಮಾಡಿದ್ದಾರೆ.
ಟ್ವೀಟರ್ ನಲ್ಲಿ ಬಿಜೆಪಿ, ಕುಮಾರಸ್ವಾಮಿ ಅವರ ಯುಟರ್ನ್ ಸರಣಿ ಮುಗಿಯುವಂತೆ ಕಾಣುತ್ತಿಲ್ಲ. ಸಾಲಮನ್ನಾ ಮಾಡಲಾಗದ ವೈಫಲ್ಯಕ್ಕೆ ಇದೀಗ ಬಿಜೆಪಿಯನ್ನು ದೂಷಿಸುತ್ತಿದ್ದಾರೆ. ಎಲ್ಲ ವೈಫಲ್ಯಕ್ಕೂ ಬಿಜೆಪಿ ದೂಷಣೆಯೇ ಸರ್ಕಾರ ನಡೆಸುವ ಕ್ರಮವಾದರೆ ರಾಜೀನಾಮೆ ನೀಡಿ ಎಂದು ಟ್ವೀಟ್ ಮಾಡಲಾಗಿತ್ತು. ಇದಕ್ಕೆ ಕಾಂಗ್ರೆಸ್ ನಾಯಕರು ಕೆಂಡಾಮಂಡಲವಾಗಿದ್ದಾರೆ.
Comments