ಆಪರೇಷನ್ ಕಮಲ ಮಾಡಲು ಮುಂದಾದವರಿಗೆ ಸಿಎಂ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದೇಕೆ..!?

ಈಗಾಗಲೇ ಚಳಿಗಾಲದ ಕೊನೆಯಲ್ಲಿ ಅಧಿವೇಶನ ಪ್ರಾರಂಭವಾಗಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿಯವರು ವಿರೋಧ ಪಕ್ಷದವರಿಗೆ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಸುವರ್ಣಸೌಧದಲ್ಲಿ ನಡೆಯುತ್ತಿರುವ ಸದನ ಸುಗಮವಾಗಿ ನಡೆಯಬೇಕೆಂದು ವಿರೋಧ ಪಕ್ಷವಾಗಿರುವ ಬಿಜೆಪಿ ಸಹಕಾರ ನೀಡುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ವಿಪಕ್ಷವನ್ನು ಅಭಿನಂದಿಸುವುದಾಗಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ ಅಧಿವೇಶನದಲ್ಲಿ ಮಾತನಾಡಿದ ಸಿಎಂ, ಮುಂಗಾರು ಮಳೆ ಕೊರತೆಯಿಂದ ಬರ ಎದುರಿಸುತ್ತಿರುವ ತಾಲ್ಲೂಕುಗಳ ಘೋಷಣೆ, ಈಗಾಗಲೇ ಹಿಂಗಾರು ಮಳೆ ಕೊರತೆಯಿಂದ ಬರಕ್ಕೆ ಒಳಗಾಗಿರುವ ತಾಲ್ಲೂಕುಗಳ ಘೋಷಣೆಯನ್ನು 2 ನೇ ಹಂತದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು..
Comments