ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಮ್ಮೆಯಾದರು ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದು ಯಾರಿಗೆ ಗೊತ್ತಾ..?
ದೋಸ್ತಿ ಸರ್ಕಾರ ಬಂದ ಮೇಲೆ ಕುಮಾರಸ್ವಾಮಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಟ್ಟವನು ನಾನು. ಸತೀಶ್ ಜಾರಕಿಹೊಳಿ ಕೂಡ ಇದೇ ನ್ಯಾಯದ ಮೇಲೆ ನಂಬಿಕೆ ಇರುವವರು. ಅವರು ಯಾಕೆ ಸಿಎಂ ಆಗಬಾರದು ಎಂಬ ಮಾತನ್ನಯ ತಿಳಿಸಿದ್ದಾರೆ.
ಬಾದಾಮಿಯಲ್ಲಿ ವಾಲ್ಮೀಕಿ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸತೀಶ್ ಜಾರಕಿಹೊಳಿ ಪರ ಬ್ಯಾಟ್ ಮಾಡಿದ್ದಾರೆ. ಯಾರು ಕೂಡ ಒಂದೇ ಸ್ಥಾನದಲ್ಲಿ ಇರುವುದಿಲ್ಲ, ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ಸಭಿಕರು ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂದು ಕೂಗಿ ಹೇಳಿದರು. ಆಗ ಸಭಿಕರ ಮಾತಿಗೆ ಸಹಮತ ಸೂಚಿಸಿದ ಸಿದ್ದರಾಮಯ್ಯ, ಹೌದು ಸತೀಶ್ ಜಾರಕಿಹೊಳಿ ಒಮ್ಮೆಯಾದರೂ ಸಿಎಂ ಆಗಬೇಕು ಎಂದು ಆ ಸಂದರ್ಭದಲ್ಲಿ ತಿಳಿಸಿದರು.
Comments