ಹೈಕೋರ್ಟ್’ನಿಂದ ಕಾಂಗ್ರೆಸ್ ಶಾಸಕನಿಗೆ ತುರ್ತು ನೋಟಿಸ್! ಆ ಶಾಸಕ ಯಾರ್ ಗೊತ್ತಾ..?
ಬೆಂಗಳೂರಿನಲ್ಲಿರುವ ರಾಜರಾಜೇಶ್ವರಿ ನಗರದಲ್ಲಿ ಕಾಮಗಾರಿಗಳ ಲೆಕ್ಕದಲ್ಲಿ ಬಹುಕೋಟಿ ನಕಲಿ ಬಿಲ್ ಸೃಷ್ಠಿ ಮಾಡಿದ ಪ್ರಕರಣದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರಾದ ಮುನಿರತ್ನರವರಿಗೆ ಹೈಕೋರ್ಟ್ ನೋಟಿಸ್ ನೀಡಿದೆ ಎನ್ನಲಾಗುತ್ತಿದೆ. ಮುನಿರತ್ನರವರ ಹೆಂಡತಿಯಾದ ಮಂಜುಳ ಅವರಿಗೆ ಸೇರಿದ ಮನೆಯಲ್ಲಿ ರಾಜರಾಜೇಶ್ವರಿ ನಗರ ಕಾಮಗಾರಿಗಳ ಬಹುಕೋಟಿ ನಕಲಿ ಬಿಲ್ ಸೃಷ್ಟಿಸಿದ ಆರೋಪ ಕೇಳಿಬರುತ್ತಿದೆ ಎನ್ನಲಾಗಿದೆ..
ಪೊಲೀಸರು ತನಿಖೆ ನಡೆಸಿ ಶಾಸಕ ಮುನಿರತ್ನ, ಪತ್ನಿ ಮಂಜುಳ ಜೊತೆಗೆ ಮತ್ತೊಬ್ಬ ವ್ಯಕ್ತಿಯನ್ನು ಆರೋಪದಿಂದ ಕೈಬಿಟ್ಟಿದ್ದರು, ಇದನ್ನು ಪ್ರಶ್ನಿಸಿ ಹಿರಿಯ ವಕೀಲ ಅಮೃತೇಶ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು, ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಶಾಸಕ ಮುನಿರತ್ನ ಅವರಿಗೆ ತುರ್ತು ನೋಟಿಸ್ ನೀಡಿದೆ ಎನ್ನಲಾಗುತ್ತಿದೆ.
Comments