ಬಿಗ್ ಬ್ರೇಕಿಂಗ್ : "ದೋಸ್ತಿ ಸರ್ಕಾರ”ದಿಂದ ಇಬ್ಬರಿಗೆ ಸಂಪುಟದಿಂದ ಕೊಕ್..!? ಯಾರ್ಯಾರು ಗೊತ್ತಾ..?

ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಸದ್ಯ ಸಚಿವರಾಗಿ ಕೆಲಸ ಮಾಡುತ್ತಿರುವ ಇಬ್ಬರಿಗೆ ಕೊಕ್ ನೀಡಲಾಗುವುದು ಎಂದು ಹೇಳಲಾಗುತ್ತಿದೆ.. ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಜಯಮಾಲ ಹಾಗೂ ಅರಣ್ಯ ಸಚಿವ ಶಂಕರ್ ಅವರನ್ನು ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಕೈಬಿಡಲಾಗುವುದು ಎಂದು ಹೇಳಲಾಗುತ್ತಿದೆ.. ಇನ್ನು ಮೊದಲ ಬಾರಿಗೆ ಆಯ್ಕೆಯಾಗಿರುವ ಜಯಮಾಲ ಅವರಿಗೆ ಕೊಟ್ಟಿರುವ ಸಚಿವ ಸ್ಥಾನದ ಬಗ್ಗೆ ಹಲವು ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ.
ಇದೆಲ್ಲದರ ಎಡಗೈ ಸಮುದಾಯದಿಂದ ಕೆಜಿಎಫ್ ಶಾಸಕಿ ರೂಪ ಶಶಿಧರ್ ಹಾಗೂ ಮರಾಠಿ ಸಮುದಾಯದಿಂದ ಅಂಜಲಿ ಹೆಬಾಳ್ಕರ್’ ಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಇನ್ನು ದೋಸ್ತಿ ಸರಕಾರ ರಚನೆಯಾಗುವ ವೇಳೆಯಲ್ಲಿ ಕೈ ಜೋಡಿಸಿ ಸರಕಾರದಲ್ಲಿ ಅರಣ್ಯ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ ಸಚಿವ ಆರ್. ಶಂಕರ್ ಅನ್ನು ಸಚಿವ ಸ್ಥಾನದಿಂದ ಹೊರಗೆ ಕಳುಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ಸದ್ಯ ಪಕ್ಷೇತರ ಶಾಸಕರಾಗಿ ಗೆದ್ದಿರುವ ಅವರು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ, ಇದಲ್ಲದೇ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರದೇ ಇರುವುದರಿಂದ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಸಹಾಯವಾಗದೇ ಇರುವುದಕ್ಕೆ ಸಾಧ್ಯವಿಲ್ಲ ಇಲ್ಲ ಹೀಗಾಗಿ ಅವರನ್ನು ಸಚಿವ ಸ್ಥಾನದಲ್ಲಿ ಉಳಿಸಿಕೊಂಡರೇ ಪ್ರಯೋಜನವಿಲ್ಲ ಅಂತ ಹೇಳಲಾಗುತ್ತಿದ್ದು, ಈ ಕಾರಣಕ್ಕಾಗಿ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲಾಗುವುದು ಎಂದು ಹೇಳಲಾಗುತ್ತಿದೆ. ಡಿಸೆಂಬರ್ 22 ರಂದು ನಡೆಯುವ ಸಚಿವ ಸಂಪುಟದಲ್ಲಿ ಈ ತಿರ್ಮಾನವನ್ನು ಕೈ ಗೊಳ್ಳಲಾಗುವುದು..
Comments