ಬಿಗ್ ಬ್ರೇಕಿಂಗ್: ಸುಮಲತಾ ಅಂಬರೀಶ್ ಲೋಕಸಭಾ ಚುನಾವಣೆಗೆ..!!??

ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಮಂಡ್ಯಗೂ ಏನೋ ಒಂಥರಾ ಅವಿನಾಭಾವ ಸಂಬಂಧ. ಮಂಡ್ಯ ಜನರಿಗೂ ಅಷ್ಟೇ ಅಂಬಿ ಎಂದರೆ ಅಪಾರ ಅಭಿಮಾನ. ಅಂಬಿ ಇನ್ನು ನೆನಪು ಮಾತ್ರ ಅನಿಸಿದರೂ ಮಂಡ್ಯದ ನಂಟು ಮಾತ್ರ ಬಿಟ್ಟಿಲ್ಲ.ಸುಮಲತಾ ಕೂಡ ಇದೇ ದಾರಿಯಲ್ಲಿ ಸಾಗುತ್ತಿದ್ದಾರೆ.
ಅಂಬರೀಶ್ ಅವರ ತಿಂಗಳ ತಿಥಿ ಕಾರ್ಯವನ್ನು ಮಂಡ್ಯದಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಅಂಬಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಜೊತೆಗೆ ರಾಜಕೀಯವಾಗಿಯೂ ಮಂಡ್ಯದೊಂದಿಗೆ ನಂಟು ಬೆಳೆಸಿಕೊಳ್ಳಲು ಸುಮಲತಾ ಚಿಂತಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮುಂದಿನ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಲತಾ ಸ್ಪರ್ಧೆ ಮಾಡ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಸುಮಲತಾ ಮಾತ್ರ ಈ ಬಗ್ಗೆ ಮಾತಾನಾಡಿಲ್ಲ..
Comments