ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಬಿಗ್ ಬ್ರೇಕ್: ಬಿ ಎಸ್ ಯಡಿಯೂರಪ್ಪ ಸಿಎಂ ಕನಸಿಗೆ ಎಳ್ಳುನೀರು: ಕಾರಣ ಏನ್ ಗೊತ್ತಾ..?

ನಮ್ಮ ರಾಜ್ಯ ರಾಜಕೀಯದ ಮೇಲೂ ಪಂಚರಾಜ್ಯಗಳ ಚುನಾವಣೆಯ ಸಾಕಷ್ಟು ಪ್ರಭಾವವನ್ನು ಬೀರಿದೆ. ಆಪರೇಷನ್ ಕಮಲದ ಮೂಲಕ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ನಾಯಕರುಗಳು ಮುಂದಾಗಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು.ಆದರೆ ಈಗ ಅದಕ್ಕೆ ಎಳ್ಳು ನೀರು ಬಿಟ್ಟಂತೆ ಆಗಿದೆ.
ಅಷ್ಟೆ ಅಲ್ಲದೆ ಕೆಲ ಕಾಂಗ್ರೆಸ್ ಶಾಸಕರು ಕೂಡ ಬಿಜೆಪಿಗೆ ಹೋಗಿ ಸಚಿವ ಸ್ಥಾನ ಪಡೆದುಕೊಳ್ಳುವುದಕ್ಕೆ ಮುಂದಾಗಿದ್ದರು, ಆದರೆ ಪಂಚರಾಜ್ಯಗಳ ಚುನಾವಣೆಯಲ್ಲಿ ಬಂದಿರುವ ಫಲಿತಾಂಶವನ್ನು ನೋಡಿ ಸುಮ್ಮನಾಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಪಂಚರಾಜ್ಯದ ಚುನಾವಣಾ ಫಲಿತಾಂಶ ರಾಜ್ಯ ರಾಜಕೀಯದ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗಿದ್ದು, ಬಿಜೆಪಿಗೆ ಹೋಗಲು ಸಿದ್ದರಾಗಿದ್ದ ಕೆಲ ಶಾಸಕರು ಸುಮ್ಮನೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದಾಗಿದೆ
Comments