ದೋಸ್ತಿ ಸರ್ಕಾರ ಉರುಳಿಸಲು ಇವರಿಬ್ಬರೇ ಸಾಕಂತೆ..!! ಅಷ್ಟಕ್ಕೂ ಯಾರವರು..?
ಬಿಜೆಪಿ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಶುಕ್ರವಾರ ಮಾತನಾಡಿದ ಅವರು, ಸರ್ಕಾರವನ್ನು ನಾವು ಬೀಳಿಸಲು ಹೋಗಲ್ಲ.
ಆಪರೇಷನ್ ಕಮಲ ಮಾಡುವ ಅವಶ್ಯಕತೆಯೂ ನಮಗಿಲ್ಲ.. ತಾನಾಗಿಯೇ ಸರ್ಕಾರ ಪತನಗೊಳ್ಳಲಿದ್ದು, ಅಸಮಾಧಾನಿತ ಶಾಸಕರೇ ಸೂಸೈಡ್ ಬಾಂಬರ್ ಗಳಾಗಲಿದ್ದಾರೆ ಎಂದು ಭವಿಷ್ಯ ನುಡಿದರು. ಸಮ್ಮಿಶ್ರ ಸರ್ಕಾರ ಬೀಳುವುದಕ್ಕೆ ಬಿಜೆಪಿ ಕಾರಣ ಆಗುವುದಿಲ್ಲ. ಬದಲಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾರಣರಾಗುತ್ತಾರೆ ಎಂದಿದ್ದಾರೆ.
Comments