ಸಚಿವ ಸಂಪುಟದ ಬಗ್ಗೆ ರೋಚಕ ಮಾಹಿತಿ ಬಿಚ್ಚಿಟ್ಟ ಕೈ ಶಾಸಕ..!!

ಸಚಿವ ಸಂಪುಟ ಡಿ.22ಕ್ಕೆ ವಿಸ್ತರಣೆಯಾಗುತ್ತದೆ ಎಂದು ತಿಳಿಸಿದ್ದರು.. ಆದರೆ ಮಾಜಿ ಗೃಹ ಸಚಿವ,ಕೈ ಶಾಸಕ ರಾಮಲಿಂಗ ರೆಡ್ಡಿ ಅವರು ಸಚಿವ ಸಂಪುಟ ವಿಸ್ತರಣೆಯಾಗಲ್ಲ ಅಂತ ಹೊಸ ಬಾಂಬ್ ಸಿಡಿಸಿದ್ದಾರೆ.
ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಹೈಕಮಾಂಡ್ ವಿಸ್ತರಣೆ ಮಾಡುವುದಾದರೆ ಆ ಕೂಡಲೇ ಸಚಿವ ಸಂಪುಟ ವಿಸ್ತರಣೆಯಾಗಲಿ, ಇಲ್ಲವಾದರೆ ಅದು ಆಗುವುದೇ ಬೇಡ, ಇದಲ್ಲದೇ ಸಚಿವ ಸ್ಥಾನ ಪಡೆದುಕೊಳ್ಳುವುಕ್ಕೆ ಯಾವುದೇ ಕಾರಣಕ್ಕೂ ಹೈಕಮಾಂಡ್ ಗೆ ಗೋಳಾಡಬೇಡಿ, ನಿಮಗೆ ಅದೃಷ್ಟವಿದ್ದರೆ ಖಂಡತ ನಿಮಗೆ ಸಚಿವ ಸ್ಥಾನ ಸಿಕ್ಕೆ ಸಿಗುತ್ತದೆ ಅಂತ ರಾಮಲಿಂಗರೆಡ್ಡಿಯವರು ತಿಳಿಸಿದ್ದಾರೆ. ಒಟ್ಟಾರೆಯಾಗಿ ಸಚಿವ ಸಂಪುಟ ವಿಸ್ತರಣೆ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ.
Comments