ದೋಸ್ತಿ ಸರಕಾರದ ಪತನಕ್ಕೆ ಡೇಟ್ ಫಿಕ್ಸ್ ಮಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್..!! ಇದಕ್ಕೆ ಸಿಎಂ ಕುಮಾರಸ್ವಾಮಿ ಹೇಳಿದ್ದು ಏನ್ ಗೊತ್ತಾ..?

06 Dec 2018 4:26 PM | Politics
5559 Report

ವಿಪಕ್ಷಗಳು ದೋಸ್ತಿ ಸರ್ಕಾರವನ್ನು ಪತನಗೊಳಿಸಲು ಸಾಕಷ್ಟು ಹರ ಸಾಹಸ ಮಾಡುತ್ತಿದ್ದಾರೆ. ಒಂದು ವೇಳೆ ಡಿ.22 ರಂದು ದೋಸ್ತಿ ಸರಕಾರದ ಸಚಿವ ಸಂಪುಟ ವಿಸ್ತರಣೆಯಾದರೇ ಅಂದೇ ದೋಸ್ತಿ ಸರಕಾರ ಪತವಾಗಲಿದೆ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.  

ಅವರು ಇಂದು ನಗರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ ನಮಗೆ ಯಾವುದೇ ಅನುದಾನ ಸಿಗುತ್ತಿಲ್ಲ, ನಮಗೆ ಮುಖ್ಯಮಂತ್ರಿಗಳು ಯಾವುದೇ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಇದೇ ಕಾರಣಗಳು ಸರಕಾರ ಪತನಕ್ಕೆ ಕಾರಣವಾಗಲಿದೆ ಅಂತ ಹೇಳಿದರು. ಆದರೆ ಕುಮಾರಸ್ವಾಮಿಯವರು ನಮ್ಮ ಸರ್ಕಾರವು ಕ್ಷೇಮವಾಗಿದೆ.. ಪತನವಾಗುವುದಕ್ಕೆ ಯಾವುದೆ ಕಾರಣಗಳಿಲ್ಲ.. 5 ವರ್ಷ ನಮ್ಮ ಸರ್ಕಾರ ಸುಭದ್ರ ಎಂದಿದ್ದಾರೆ.

Edited By

Manjula M

Reported By

Manjula M

Comments