ತೆನೆಹೊರಲು ಸಿದ್ದರಾದ್ರ ಬಿಜೆಪಿ ಶಾಸಕರು..!! ಈ ಬಗ್ಗೆ ಸಿಎಂ ಹೆಚ್ಡಿಕೆ ಹೇಳಿದ್ದೇನು..?
ಆಪರೇಷನ್ ಕಮಲ ಕುರಿತು ನಮ್ಮ ಮೇಲೆ ಆರೋಪ ಮಾಡುವಲ್ಲಿ ಸಮ್ಮಿಶ್ರ ಸರ್ಕಾರದ ನಾಯಕರಿಗೆ ಹೊಸ ಫ್ಯಾಷನ್ ಆಗಿದೆ. ಮೈತ್ರಿ ಸರ್ಕಾರದಲ್ಲಿ ಒಗ್ಗಟ್ಟಿಲ್ಲದೆ ಬೇರೆಯವರನ್ನು ಭಯಪಡಿಸಲು ಈ ರೀತಿಯಾಗಿ ಸೃಷ್ಟಿಸುವುದು ಅವರಿಗೆ ಸಾಮಾನ್ಯವಾಗಿದೆ ಎಂದು ಶಾಸಕ ಬಿ.ಶ್ರೀರಾಮುಲು ಆರೋಪಿಸಿದರು
ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ನಮ್ಮ ಪಾರ್ಟಿಯ ಶಾಸಕರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಅವರ ಶಾಸಕರನ್ನು ಯಾವತ್ತು ನಾವು ಕರೆದಿಲ್ಲ. ರಾಜ್ಯ ಬರದಲ್ಲಿದೆ ಬರದ ಬಗ್ಗೆ ಗಮನ ಕೊಡದೆ ಆಪರೇಷನ್ ಕಮಲ ಅಂತ ಜನರನ್ನು ದಿಕ್ಕು ತಪ್ಪಿಸಿ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ರೀ ರಾಮುಲು ತಿಳಿಸಿದ್ದಾರೆ.. ಇಷ್ಟುದಿನ ಶ್ರೀರಾಮುಲು, ಯಡಿಯೂರಪ್ಪ ಎನ್ನುತ್ತಿದ್ದ ಅವರು ಈಗ ನಮ್ಮ ಪಿಎಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ ಕುಮಾರಸ್ವಾಮಿಯವರು ನಾವು ಯಾರನ್ನು ಕರೆದಿಲ್ಲ.. ಬಿಜೆಪಿಯ ಅಭ್ಯರ್ಥಿಗಳು ತಾವಾಗಿಯೇ ಜೆಡಿಎಸ್ ಸೇರಿಕೊಳ್ಳಲಿದ್ದಾರೆ ಎಂಬದು ಎಲ್ಲರಿಗೂ ತಿಳಿದಿರುವ ವಿಷಯವೇ ಎಂದು ಸರಿಯಾಗಿಯೇ ಸಿಎಂ ಹೆಚ್’ಡಿಕೆ ಟಾಂಗ್ ಕೊಟ್ಟಿದ್ದಾರೆ.
Comments