ಹೆಚ್’ಡಿಕೆಗೆ ಸಾಥ್ ಕೊಟ್ಟ ಹೆಚ್ ಡಿ ರೇವಣ್ಣ..!! ಯಾವ ವಿಷಯದಲ್ಲಿ ಗೊತ್ತಾ..?

ಸಮ್ಮಿಶ್ರ ಸರಕಾರದಲ್ಲಿ ಸಿಎಂ ಹೆಚ್’ಡಿಕೆಯವರ ಸಹೋದರ ಹೆಚ್.ಡಿ ರೇವಣ್ಣನವರು ಸೂಪರ್ ಸಿಎಂ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇತ್ತಿಚಿಗೆ ರೇವಣ್ಣ ಮಾಡಿರುವ ಕೆಲವು ಕೆಲಸಗಳಿಗೆ ಜನರು ಮೆಚ್ಚುಗೆಯನ್ನು ಕೂಡ ವ್ಯಕ್ತ ಪಡಿಸಿದ್ದಾರೆ.
ಹೆಚ್.ಡಿ ರೇವಣ್ಣನವರು ದೇವರು, ವಾಸ್ತು ಗಳನ್ನು ನೋಡಿಯೇ ಏನೇ ಕೆಲಸವಾದ್ರು ಮಾಡೋದು. ತಲೆ ಮೇಲೆ ತಲೆ ಬಿದ್ದರು ರೇವಣ್ಣನವರು ಸರಿಯಾದ ಸಮಯಕ್ಕೆ ಮಾತ್ರ ತಮ್ಮ ಕೆಲಸವನ್ನು ಆರಂಭಿಸುತ್ತಾರೆ ಅನ್ನೋದು ಎಲ್ಲರಿಗೂ ತಿಳಿದೆ ಇದೆ. ಈ ನಡುವೆ ಕುಟುಂಬ ಸಮೇತ ಶೃಂಗೇರಿಗೆ ಹೆಚ್ಡಿಕೆ ಪಯಣ ಬೆಳೆಸಲಿದ್ದಾರೆ ಎಂದು ಹೇಳಲಾಗುತ್ತಿದ್ದು ಸಚಿವ ರೇವಣ್ಣ ಕೂಡ ಸಾಥ್ ನೀಡಲಿದ್ದಾರೆ ಅಂತ ತಿಳಿದು ಬಂದಿದೆ. ಸಿಎಂ ಹೀಗೆ ದಿಢೀರ್ ಆಗಿ ಶೃಂಗೇರಿಗೆ ಭೇಟಿ ನೀಡುವುದಕ್ಕೆ ಕಾರಣ ಹೆಚ್. ಡಿ ರೇವಣ್ಣ ಎನ್ನಲಾಗುತ್ತಿದ್ದು, ಇದಕ್ಕಾಗಿಯೇ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
Comments