ಬಿಜಿಪಿ ನಾಯಕನಿಗೆ ಸಖತ್ತಾಗಿ ಟಾಂಗ್ ಕೊಟ್ಟ ದೋಸ್ತಿ ಸರ್ಕಾರದ ಈ ಚಾಣಕ್ಯ...!!!

ಪಿಎ ಸುರ್ಜಿತ್ ಅವರು ನನ್ನ ಪಿ.ಎ ಅಲ್ಲ, ಶ್ರೀರಾಮುಲು ಅಣ್ಣನವರ ಪಿಎ ಎಂದು ಹೇಳಿದ್ದಾರೆ. ತನ್ನ ಪಿಎ ಅಲ್ಲ ಎಂದೇಳುವ ಶ್ರೀರಾಮುಲು ಹಗಲು-ರಾತ್ರಿ ಸರ್ಜಿತ್ ಅವರನ್ನುತನ್ನ ಹಿಂದೆಯೇ ಸುತ್ತಾಡಿಸುತ್ತಾರೆ. ಅಲ್ಲದೇ ಅವರು ನನ್ನ ಪಿಎ ಎಂದು ಊರು ಸುತ್ತಾ ಹೇಳಿಕೊಂಡು ತಿರುತ್ತಾರೆ. ಇರೋದು ಅವರ ಬಳಿ,ಹೆಸರು ನನ್ನೊಂದಿಗೆ ಬಳಸುತ್ತಾರೆ ಎಂದು ರಾಮುಲುಗೆ ಡಿಕೆಶಿ ಭರ್ಜರಿ ಟಾಂಗ್ ನೀಡಿದ್ದಾರೆ.
ಅವರು ಇಂದು ಸದಾಶಿವನಗರದ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು, ಇದೇ ವೇಳೆ ಅವರುಮಾತನಾಡಿ ಶಾಸಕ ಅಶ್ವಥ್ ನಾರಾಯಣ ಮೂರು ದಿನದ ಹಿಂದೆ ಬ್ರಿಗೇಡ್ ಟವರ್ನಲ್ಲಿ ಯಾರನ್ನು ಭೇಟಿ ಮಾಡಿದ್ದರು ಎಂದು ಹೇಳಲಿ? ಜನಾರ್ದನ ರೆಡ್ಡಿ ನಿನ್ನೆ ರಾತ್ರಿ ಜಿಂದಾಲ್ ಆಸ್ಪತ್ರೆಯಲ್ಲಿ ಸುಧಾಕರ್ರನ್ನು ಯಾಕೆ ಭೇಟಿ ಮಾಡಿದರು ಎಂದು ಹೇಳಲಿ? ಬೇಕಾದರೆ ಅವರು ಇನ್ನೂ ನೂರು ಜನರನ್ನು ಭೇಟಿ ಮಾಡಲಿ, ನೂರಾರು ಕೋಟಿ ಆಫರ್ ಮಾಡಲಿ. ಕಣ್ಣು ಮುಚ್ಚಿಕೊಂಡು ಹಾಲು ಕುಡಿದ್ರೆ ಜಗತ್ತಿಗೆ ಗೊತ್ತಾಗೋದಿಲ್ವಾ ಅಂತ ವ್ಯಂಗ್ಯವಾಡಿದರು.
Comments