ಬ್ರೇಕಿಂಗ್ : ಬಿಜೆಪಿಯ ಪ್ರಭಾವಿ ಶಾಸಕನ ಬಂಧನ..!!
ಸಮರ್ಪಕ ಮರಳು ಪೂರೈಕೆ ಮತ್ತು ಅವಳಿ ತಾಲ್ಲೂಕನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಂತಹ ಬಿಜೆಪಿ ಶಾಸಕರಾದ ಎಂ ಪಿ ರೇಣುಕಾಚಾರ್ಯ ಅವರನ್ನು ಬಂಧಿಸಲಾಗಿದೆ
ಇಂದು ಸಮರ್ಪಕ ಮರಳು ಪೂರೈಕರ ಹಾಗೂ ಅವಳಿ ತಾಲ್ಲೂಕನ್ನು ಬರ ಪೀಡಿತ ಘೋಷಣೆ ಮಾಡುವಂತೆ ಆಗ್ರಹಿಸಿ ಹೊನ್ನಾಳಿ ಬಂದ್ ಗೆ ಕರೆ ನೀಡಲಾಗಿತ್ತು. ಈ ವೇಳೆ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ಶಾಸಕ ರೇಣುಕಾಚಾರ್ಯ ಅವರು ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ.. ಇದೇ ವೇಳೆ ರೇಣುಕಾಚಾರ್ಯ ವರ್ತನೆಯಿಂದ ಬೇಸತ್ತ ಜನತೆ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿಯೇ ರೇಣುಕಾಚಾರ್ಯ ಅವರನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ.
Comments