ಕೊನೆಗೂ ಪ್ರಜ್ವಲ್ ರೇವಣ್ಣಗೆ ಸಿಕ್ಕಿತ್ತು ಜೆಡಿಎಸ್ ಉಸ್ತುವಾರಿ ಜವಾಬ್ದಾರಿ..!? ಯಾವ ಜಿಲ್ಲೆ ಗೊತ್ತಾ..?

ಹಾಸನ ಕ್ಷೇತ್ರದ ಮಾಜಿ ಶಾಸಕರು ಮತ್ತು ಜೆಡಿಎಸ್ ಮುಖಂಡರಾದ ಹೆಚ್.ಎಸ್. ಪ್ರಕಾಶ್ ನಿಧನದಿಂದ ತೆರವಾಗಿರುವ ಹಾಸನ ಕ್ಷೇತ್ರ ಉಸ್ತುವಾರಿ ವಹಿಸಿಕೊಳ್ಳಲು ಪ್ರಜ್ವಲ್ ರೇವಣ್ಣರಿಗೆ ಹೆಚ್.ಡಿ. ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಹಾಸನದಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ಜೆಡಿಎಸ್ ಸಂಘಟನೆ ಕುಸಿದಿದೆ. ಹಾಗಾಗಿ ರಾಜಕೀಯ ಪ್ರವೇಶಕ್ಕೆ ಸಿದ್ದವಾಗಿರುವ ಪ್ರಜ್ವಲ್ ರೇವಣ್ಣರಿಗೆ ಹಾಸನ ಕ್ಷೇತ್ರದ ಉಸ್ತುವಾರಿ ನೀಡಲು ಹೆಚ್.ಡಿ.ದೇವೇಗೌಡರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಪ್ರಜ್ವಲ್ ರೇವಣ್ಣರವರು ರಾಜಕೀಯ ಎಂಟ್ರಿಗೆ ಸಿದ್ದರಾಗಿದ್ದಾರೆ ಎನ್ನಲಾಗಿದೆ.
Comments