ದೋಸ್ತಿ ಸರಕಾರದ ಸಂಪುಟ ವಿಸ್ತರಣೆಗೆ ಮಹೂರ್ತ ಫಿಕ್ಸ್..! ಯಾವಾಗ ಗೊತ್ತಾ..?
ದೋಸ್ತಿ ಸರಕಾರದ ಬಹಳ ದಿನದಿಂದ ಎಳೆದಾಡುತ್ತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಅಂತೂ ಇಂತೂ ಮಹೂರ್ತ ಕೂಡಿ ಬಂದಂತಿದೆ. ಎಲ್ಲವೂ ಅಂದುಕೊಂಡತೆ ಆದರೆ ಇದೇ ನವೆಂಬರ‍್ 28ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗಿದೆ.
ಉಪಚುನಾವಣೆಯ ಬಳಿಕ ಮತ್ತೆ ಸಂಪುಟ ವಿಸ್ತರಣೆ ಗರಿಗೆದರಿದರಿದ್ದು, ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲಿ ಲಾಭಿ ನಡೆಸಿದ್ದು, ಸಮ್ಮಿಶ್ರ ಸರಕಾರ ರಚನೆಯಾದ ಬಳಿಕ ಉಳಿದುಕೊಂಡಿದ್ದ ಸಚಿವ ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವದಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಡ್ಡಿಯಾಗಿತ್ತು. ಆದರೆ ಸ್ಥಳೀಯ ಚುನಾವಣೆ ಮುಗಿದ ಬಳಿಕ ಕೂಡ ಸಚಿವ ಸಂಪುಟ ವಿಸ್ತರಣಯಾಗಲೇ ಇಲ್ಲ. ಬಳಿಕ ಪಂಚ ಕ್ಷೇತ್ರಗಳ ಉಪಚುನಾವಣೆ ಬಳಿಕ ಕೂಡ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗುತಿತ್ತು. ಆದರೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣಗಲ್ಲಿ ಹೊರ ಹಾಕಿದರೂ ಇದನ್ನು ಮನಗಂಡ ಪಕ್ಷದ ಮುಖಂಡರು ಈಗಲೇ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಮುಂಬರುವ ಲೋಕಸಭಾ ಚುನಾವಣೆವೇಳೆಯಲ್ಲಿ ಸಚಿವ ಸ್ಥಾನ ಸಿಗದೇ ಇರುವವರು ಅಸಮಾಧಾನ ವ್ಯಕ್ತಪಡಿಸಿ ಬಂಡಾಯದ ಬಾವುಟ ಹಾರಿಸಬಹುದು ಹೀಗಾಗಿ ಈಗಲೇ ಸಚಿವ ಸಂಪುಟ ವಿಸ್ತರಣೆ ಮಾಡುವುದು ಒಳಿತಲ್ಲ ಎನ್ನುವ ಮಾತೊಂದು ಜೆಡಿಎಸ್ ಗಿಂತ ಹೆಚ್ಷಾಗಿ ಕಾಂಗ್ರೆಸ್ ನಲ್ಲಿ ಕೇಳಿ ಬರತೊಡಗಿದ್ದವು. ದೋಸ್ತಿ ಸರಕಾರದ ಸಚಿವ ಸ್ಥಾನವನ್ನು ಈ ತಿಂಗಳ ಕೊನೆಯಲ್ಲಿ ತುಂಬುವ ಬಗ್ಗೆ ಕೆಪಿಸಿಸಿ ಅಧ್ಯಕ್ಷದಿನೇಶ್ ಗುಂಡೂರಾವ್ ಮಾತನಾಡಿದರೆ.
Comments