ಮೈಸೂರು ಮೇಯರ್ ಪಟ್ಟ ಜೆಡಿಎಸ್ ಗೆ..??
ಮೈಸೂರು ಮೇಯರ್ ಸ್ಥಾನ ಒಂದು ವರ್ಷ ಜೆಡಿಎಸ್ ಗೆ ಬಿಟ್ಟುಕೊಡಲಿ, ಮುಂದಿನ ವರ್ಷ ಅವರಿಗೆ ನಾವು ಬಿಟ್ಟು ಕೊಡುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಸಾ. ರಾ. ಮಹೇಶ್ ರವರು ಮಾತನಾಡಿ ಈಗಾಗಲೇ 4 ವರ್ಷ ಬಿಬಿಎಂಪಿ ಯಲ್ಲಿ ಕಾಂಗ್ರೆಸ್ ನವರು ಮೇಯರ್ ಪಟ್ಟ ಅಲಂಕರಿಸಿದ್ದು ಒಂದು ವರ್ಷ ಮೈಸೂರಿನಲ್ಲಿ ಜೆಡಿಎಸ್ ಗೆ ಮೇಯರ್ ಪಟ್ಟ ಬಿಟ್ಟು ಕೊಡುವಂತೆ ಮಾತನಾಡಿದರೆ. ಈಗಾಗಲೇ ಬಿಜೆಪಿ ಮುಖಂಡರು ಕೂಡ ನನ್ನನ್ನು ಸಂಪರ್ಕಿಸಿದ್ದಾರೆ. ಪಕ್ಷದ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಬದ್ದ ಎಂದರು. ಮುಂಜಾಗ್ರತಾ ಕ್ರಮವಾಗಿ ರಾಮನಗರದ ಬಳಿ ಇರುವ ರೆಸಾರ್ಟ್ ಗೆ ಜೆಡಿಎಸ್ ನ ಸದಸ್ಯರು ಶಿಫ಼್ಟ್.
Comments