ಮತ್ತೆ ಜೈಲು ಪಾಲಾಗ್ತಾರಾ ಮಾಜಿ ಸಿಎಂ ಬಿ.ಎಸ್.ವೈ..!! ಕಾರಣ ಏನ್ ಗೊತ್ತಾ..?

16 Nov 2018 9:27 AM | Politics
5278 Report

ಗುಂಡ್ಲುಪೇಟೆ ಉಪಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯುರಪ್ಪ ವಿರುದ್ಧ  ಪ್ರಕರಣ ದಾಖಲಾಗಿದ್ದು ಇದರ  ವಿಚಾರಣೆ ಪೂರ್ಣಗೊಳಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನವೆಂಬರ್ 29 ಕ್ಕೆ ತೀರ್ಪುನ್ನು ಕಾಯ್ದಿರಿಸಿದೆ.

ಗುಂಡ್ಲುಪೇಟೆ ಉಪಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಭೀಮನಬೀಡು ಗ್ರಾಮಕ್ಕೆ ಹೋಗಿದ್ದ ಯಡಿಯೂರಪ್ಪ ಕಮಲದ ಗುರುತಿಗೆ ಮತ ನೀಡುವವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಕೈ ಎತ್ತಿ ಎಂದು ಹೇಳಿದ್ದರು. ಅಧಿಕಾರಕ್ಕೆ ಬಂದರೆ ಗ್ರಾಮವನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದರು. ಸಂಬಂಧ ದಾಖಲಾದ ಪ್ರಕರಣದ ತನಿಖೆ ಯಡಿಯೂರಪ್ಪ ವಿರುದ್ಧ  ಈ ಆರೋಪ ಸಾಬಿತಾದರೆ ಐಪಿಸಿ ಕಲಂ 171 ಎಫ್ ಅಡಿ ಗರಿಷ್ಠ 1 ವರ್ಷ ಜೈಲು ಅಥವಾ ದಂಡ ಅಥವಾ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬಹುದು ಎಂದು ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments